ತತ್ವಶಾಸ್ತ್ರ ಅನುಸರಿಸುವುದರಿಂದ ಕೋವಿಡ್ ನಿರ್ಮೂಲನೆ ಸಾಧ್ಯ: ಉಷಾ ಠಾಕೂರ್ - ಮಧ್ಯಪ್ರದೇಶದ ಇಂದೋರ್
🎬 Watch Now: Feature Video
ಇಂದೋರ್(ಮಧ್ಯಪ್ರದೇಶ): ಕೋವಿಡ್ -19ಯಿಂದ ನಾವು ಮುಕ್ತಿ ಹೊಂದಬೇಕು ಎಂದರೆ ಭಾರತೀಯ ತತ್ವಶಾಸ್ತ್ರವನ್ನು ಅನುಸರಿಸಬೇಕು ಎಂದು ಮಧ್ಯಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಷಾ ಠಾಕೂರ್ ಹೇಳಿದ್ದಾರೆ. ಭಾರತೀಯ ತತ್ತ್ವಶಾಸ್ತ್ರವನ್ನು ನಾವು ಅನುಸರಿಸುತ್ತಾ ಹೋಗುವುದರಿಂದ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ, ಕೋವಿಡ್ -19 ಸೋಂಕು ಮಧ್ಯಪ್ರದೇಶದ ಇಂದೋರ್ನಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಇದೆ ಎಂದು ಅವರು ಹೇಳಿದ್ದಾರೆ.