ಟೆಂಪೋ-ಡಂಪರ್ ಮುಖಾಮುಖಿ ಡಿಕ್ಕಿ... ಐವರ ಸಾವು! - Five died in Road accident,
🎬 Watch Now: Feature Video
ಭೀಕರ ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅಸ್ಸೋಂನ ನಾಗೋನ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಕುರುವಾಬಾಹಿಯಲ್ಲಿ ಡಂಪರ್ ಮತ್ತು ಟೆಂಫೋ ಮಧ್ಯೆ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೂವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಅತಿಕುರ್ ರೆಹಾಮಾನ್, ಸೊಂಟಿ ಅಹ್ಮದ್, ದುಲುಮೊನಿ ದೇವಿ, ಅಫ್ಜ್ ಅಹ್ಮದ್, ಪ್ರಂಜಾಲ್ ಬೊರ್ಡೊಲೊಯಿ ಎಂದು ಗುರುತಿಸಲಾಗಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.