ಕೋಲ್ಕತ್ತಾ: ಹೌರಾ ಬ್ರಿಡ್ಜ್ ಮೇಲೆ ಹೊತ್ತಿ ಉರಿದ ಬಸ್ - ಬಸ್‌ನಲ್ಲಿ ಬೆಂಕಿ ಲೇಟೆಸ್ಟ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9596367-623-9596367-1605795572604.jpg)
ಕೋಲ್ಕತ್ತಾ: ಹೌರಾ ಸೇತುವೆ ಮೇಲೆ ಚಲಿಸುತ್ತಿದ್ದ ಬಸ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಗುರುವಾರ ಸಂಜೆ 5.20 ರ ಸುಮಾರಿಗೆ ಬಸ್ ಹೌರಾ ಸೇತುವೆ ದಾಟುತ್ತಿದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಬಸ್, ಹೌರಾದಿಂದ ಕೋಲ್ಕತ್ತಾ ಕಡೆಗೆ ಹೋಗುತ್ತಿದ್ದಾಗ ಹೌರಾ ನಿಲ್ದಾಣ ಹಾಗೂ ಹರಿನವಿ ಮಾರ್ಗದಲ್ಲಿ ಈ ಘಟನೆ ನಡೆದಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.