‘ಅಯ್ಯೋ ನಮ್ಮ ಮಗನ ದೇಹವನ್ನು ಕೊಯ್ಬೇಡಿ’: ಪೋಷಕರು ಅಂಗಲಾಚಿದ್ರೂ ತಪ್ಪದ ಕಾನೂನು ಕ್ರಮ! - Family refused to son post mortem,
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5394007-937-5394007-1576507806887.jpg)
ಮಗನ ದೇಹವನ್ನು ಕೊಯ್ದು ಮರಣೊತ್ತರ ಪರೀಕ್ಷೆ ನಡೆಸುವುದು ಬೇಡವೆಂದು ಕುಟುಂಬಸ್ಥರು ಅಂಗಲಾಚಿದ್ರೂ ಪ್ರಯೋಜನೆವಾಗಿಲ್ಲ. ಶವ ಪರೀಕ್ಷೆ ಬೇಡವೆಂದು ತಮ್ಮ ಮಗನನ್ನು ಬೈಕ್ ಮೇಲೆ ತೆಗೆದುಕೊಂಡು ಹೋಗಲು ಪೊಲೀಸರು ಬಿಡಲಿಲ್ಲ. ಈ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಗೋವಿಂದಿನ್ನ ಗ್ರಾಮದ ನಾರಾಯಣ (19) ಕಿಟನಾಶಕ ಔಷಧಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ನಾರಾಯಣ ಮೃತಪಟ್ಟಿದ್ದಾನೆ. ವಿಷ ಸೇವಿಸಿ ಮೃತಪಟ್ಟಿರುವುದರಿಂದ ನಾರಾಯಣನ ಮೃತದೇಹವನ್ನು ಶವ ಪರೀಕ್ಷೆ ನಡೆಸುವುದು ಕಾನೂನು ಪ್ರಕರಾ ಕಡ್ಡಾಯವಾಗಿತ್ತು. ಆದ್ರೆ, ಶವ ಪರೀಕ್ಷೆ ಬೇಡವೆಂದು ಕುಟುಂಬಸ್ಥರು ಮತ್ತು ಸಂಬಂಧಿಕರು ಅಂಗಲಾಚಿದ್ದರು. ಈ ವೇಳೆ 'ನಮ್ಮ ಮಗನ ದೇಹವನ್ನು ಕೊಯ್ದು ಕೊಡುವುದು ಬೇಡ'ವೆಂದು ಕುಟುಂಬಸ್ಥರು ಪರಿಪರಿಯಾಗಿ ಅಂಗಲಾಚುತ್ತಿದ್ದರು. ಅಲ್ಲದೆ, ಆ ಮೃತದೇಹವನ್ನು ಆಸ್ಪತ್ರೆಯಿಂದ ಹೊರ ತಂದು ಬೈಕ್ ಮೇಲೆ ಮನೆಗೊಯ್ಯಲು ಯತ್ನಿಸಿದರು. ಆದ್ರೆ ಪೊಲೀಸರು ಅವರನ್ನು ತಡೆದರು. ಮೃತನ ಕುಟುಂಬಸ್ಥರನ್ನು ಶಾಂತಗೊಳಿಸಿ ಶವಪರೀಕ್ಷೆಗೆ ಅನುವು ಮಾಡಿಕೊಟ್ಟರು.
Last Updated : Dec 16, 2019, 9:01 PM IST