Watch: 'ಭಾರತ್ ಮಾತಾ ಕಿ ಜೈ' - ಕಾಬೂಲ್ನಿಂದ ಭಾರತಕ್ಕೆ ಮರಳಿದವರ ಕೃತಜ್ಞತೆ - ಭಾರತೀಯ ವಾಯುಪಡೆ
🎬 Watch Now: Feature Video
ಜಾಮ್ನಗರ್ (ಗುಜರಾತ್): ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್ ಉಗ್ರರ ಪಾಲಾಗುತ್ತಿದ್ದಂತೆಯೇ ಪ್ರಾಣ ಉಳಿಸಿಕೊಳ್ಳಲು ಜನರು ಅಲ್ಲಿಂದ ತಪ್ಪಿಸಿಕೊಂಡು ಪಲಾಯನ ಮಾಡುತ್ತಿದ್ದಾರೆ. ಕಾಬೂಲ್‌ನಲ್ಲಿದ್ದ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು, ಐಟಿಬಿಪಿ ಸಿಬ್ಬಂದಿ ಸೇರಿದಂತೆ 120 ಮಂದಿ ಭಾರತೀಯರನ್ನು ಭಾರತೀಯ ವಾಯುಪಡೆ ತನ್ನ C -17 ವಿಮಾನದಲ್ಲಿ ದೇಶಕ್ಕೆ ಕರೆತಂದಿದೆ. ಗುಜರಾತ್ನ ಜಾಮ್ನಗರ್ದಲ್ಲಿ ಬಂದಿಳಿದ ಇವರೆಲ್ಲಾ 'ಭಾರತ್ ಮಾತಾ ಕಿ ಜೈ' ಎಂದು ಘೋಷಣೆ ಕೂಗುತ್ತಾ ದೇಶಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.