thumbnail

By

Published : Dec 17, 2020, 1:06 PM IST

ETV Bharat / Videos

ಮದ್ಯದ ಅಮಲಿನಲ್ಲಿ ಟವರ್​ ಏರಿದ ಯುವಕ: ಮೇಲಿಂದ ಬಿದ್ದು ಪ್ರಾಣಬಿಟ್ಟ 'ಪಪ್ಪು' - ವಿಡಿಯೋ

ಛತ್ತೀಸ್​ಗಡ (ಚಂಪಾ): ಮದ್ಯದ ಅಮಲಿನಲ್ಲಿದ್ದ ಯುವಕನೋರ್ವ ಬಾರದಲೋಕಕ್ಕೆ ತೆರಳಿದ್ದಾನೆ. ಪ್ರಕಾಶ್​ ಎಂಬ ಯುವಕ 150 ಅಡಿ ಎತ್ತರದ ಮೊಬೈಲ್​ ಟವರ್​ ಹತ್ತಿದ್ದು, ಮೇಲಿಂದ ಕೆಳಗೆ ಹಾರಿ ಪ್ರಾಣಬಿಟ್ಟಿದ್ದಾನೆ. ಪೊಲೀಸರ ಮಾಹಿತಿ ಪ್ರಕಾರ, ಪ್ರಕಾಶ್​ ಅಲಿಯಾಸ್​ ಪಪ್ಪು (22) ಪಾಮ್​ಗಡದಲ್ಲಿರುವ ಹಳೆಯ ಮನೆಯೊಂದರಲ್ಲಿ ವಾಸಿಸುತ್ತಿದ್ದ. ಮನೆಯ ಪಕ್ಕದಲ್ಲೇ ಇರುವ ಟವರ್​ ಏರಿದ ಈತ ಅಲ್ಲಿಂದ ಹಾರಿ ಸಾವನ್ನಪ್ಪಿದ್ದಾನೆ. ಅನೇಕ ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಆತ ಗೆಳೆಯರ ಜೊತೆ ಮಾತನಾಡುತ್ತಿದ್ದ ತಿಳಿದುಬಂದಿದೆ. ಪಪ್ಪು ಟವರ್​ ಏರಿದನ್ನು ಕಂಡ ಸ್ಥಳೀಯರು ಆತನನ್ನು ಮನವೊಲಿಸಲು ಯತ್ನಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸ್ ಉಸ್ತುವಾರಿ ಕೆ.ಪಿ.ಟಂಡನ್ ಕೆಳಗಿಳಿಯುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಅವರ ಮಾತು ಕೇಳದ ಪಪ್ಪು ಟವರ್​ನಿಂದ ಹಾರಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.