ಮಕ್ಕಳಿಲ್ಲದ ದಂಪತಿಗೆ ಮಗನಂತಿದ್ದ ಶ್ವಾನ ಇನ್ನಿಲ್ಲ... ಸಾಕು ನಾಯಿಗೆ ಮನುಷ್ಯರಂತೆ ಅಂತ್ಯಸಂಸ್ಕಾರ - ಕರ್ನೂಲು ಜಿಲ್ಲೆಯ ಆಳ್ಲಗಡ್ಡೆ ನಗರ
🎬 Watch Now: Feature Video
ಕರ್ನೂಲ್(ಆಂಧ್ರಪ್ರದೇಶ): 17 ವರ್ಷಗಳಿಂದ ಕುಟುಂಬದ ಸದಸ್ಯನಂತಿದ್ದ ಸಾಕು ನಾಯಿ ಇನ್ನಿಲ್ಲ. ಈ ದುಃಖದ ವಿಷಯವನ್ನು ಹೇಳಲು ಮಾತುಗಳೇ ಹೊರಡುತ್ತಿಲ್ಲ. ಹೌದು, ಪ್ರೀತಿಯ ಶ್ವಾನ ತೀವ್ರ ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆ ಅದಕ್ಕೆ ಮನುಷ್ಯರಂತೆಯೇ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಅದರ ಮಾಲೀಕರು ಅಲ್ಲಲ್ಲ... ಅದರ ಅಪ್ಪ-ಅಮ್ಮನಂತಿದ್ದ ದಂಪತಿ ಮಾನವೀಯತೆ ಮೆರೆದಿರುವ ಘಟನೆ ಘಟನೆ ಕರ್ನೂಲು ಜಿಲ್ಲೆಯ ಆಳ್ಲಗಡ್ಡೆ ನಗರದಲ್ಲಿ ನಡೆದಿದೆ. ಭಾಸ್ಕರ್ ರೆಡ್ಡಿ ಹಾಗೂ ಲತಾ ದಂಪತಿ ಮಕ್ಕಳಿಲ್ಲದ ಕಾರಣ ನಾಯಿಯನ್ನು ಸ್ವಂತ ಮಗನಂತೆ ಸಾಕಿದ್ದರು. ಒಂದು ವಾರದಿಂದ ಅದು ತೀವ್ರ ಅನಾರೋಗ್ಯದಿಂದ ಬಳಲುತ್ತಿತ್ತು. ಇಂದು ಕೊನೆಯುಸಿರೆಳೆದಿದೆ. ಅಗಲಿದ ನೆಚ್ಚಿನ ಶ್ವಾನಕ್ಕೆ ಈ ದಂಪತಿ ಅದರ ನಿಷ್ಠೆಗೆ ಗೌರವ ಸಲ್ಲಿಸುವ ಮೂಲಕ ಅಂತ್ಯ ಸಂಸ್ಕಾರ ಮಾಡಿದ್ದಾರೆ.
Last Updated : Feb 23, 2020, 9:32 PM IST