ಹೋಳಿ ಆಚರಣೆ: ನವದೆಹಲಿಯಲ್ಲಿ ಪೊಲೀಸ್​​​ ಸರ್ಪಗಾವಲು

🎬 Watch Now: Feature Video

thumbnail

By

Published : Mar 9, 2020, 10:54 AM IST

ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದ ಹಿಂಸಾಚಾರದ ಹಿನ್ನೆಲೆಯಲ್ಲಿ ಹೋಳಿ ಆಚರಣೆಗೆ ಭಾರಿ ಭದ್ರತೆ ಒದಗಿಸಲಾಗಿದೆ. ಮತ್ತೆ ಗಲಭೆ ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಇದಕ್ಕಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಗಲಭೆ ಪೀಡಿತ ಪ್ರದೇಶ ಹಾಗೂ ಗಾಜಿಯಾಬಾದ್​​ ಸುತ್ತಮುತ್ತ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಇನ್ನು ಈ ಪ್ರದೇಶಗಳಲ್ಲಿ ಡ್ರಂಕ್​​​ ಅಂಡ್​ ಡ್ರೈವ್​, ರಸ್ತೆ ನಿಯಮ ಉಲ್ಲಂಘನೆಯಂತಹ ಪ್ರಕರಣಗಳ ಮೇಲೂ ಪೊಲೀಸರು ನಿಗಾ ಇಟ್ಟಿದ್ದಾರೆ. ವಜೀರಾಬಾದ್​ ರೋಡ್​​, ತುಳಸಿ ನಿಕೇತನ್​ ಬಾರ್ಡರ್​​ಗಳಲ್ಲಿ ರಸ್ತೆಗಳನ್ನ ಬಂದ್​ ಮಾಡಲಾಗಿದೆ. ಅಲ್ಲದೆ ಸಿಸಿಟಿವಿ ಕಣ್ಗಾವಲು ಹಾಕಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.