'ಬಿಗ್ ಬಾಸ್ ಕನ್ನಡ ಸೀಸನ್ 11' ಹತ್ತನೇ ವಾರದಲ್ಲಿದೆ. ಒಂಭತ್ತನೇ ವಾರಾಂತ್ಯದಲ್ಲಿ ಶಾಕಿಂಗ್ ಎಂಬಂತೆ ಮನೆಯಿಂದ ಶೋಭಾ ಶೆಟ್ಟಿ ಹೊರಬಂದಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡು ಅವರು ಹೊರಬಂದಿದ್ದಾರೆ. ಇದು ಮನೆಮಂದಿ ಜೊತೆಗೆ ಪ್ರೇಕ್ಷಕರಿಗೂ ಅಚ್ಚರಿ ತರಿಸಿದೆ. ಈ ಶಾಕಿಂಗ್ ಸಿಚುವೇಶನ್ ನಂತರ ಎಂದಿನಂತೆ ಆಟ ಸಾಗಿದ್ದು, ಇಂದಿನ ಟಾಸ್ಕ್ಗಳು ಹೇಗಿರಲಿವೆ ಎಂಬ ಸುಳಿವನ್ನು ಪ್ರೋಮೋ ಬಿಟ್ಟುಕೊಟ್ಟಿದೆ.
ಈ ವಾರ ಬಿಗ್ ಬಾಸ್ ಮನೆಯಲ್ಲಿ ವಾಹಿನಿಗಳು ತಲೆಯೆತ್ತಿವೆ. ಎರಡು ತಂಡಗಳಾಗಿ ಸ್ಪರ್ಧಿಗಳನ್ನು ವಿಂಗಡಿಸಲಾಗಿದೆ. ಎರಡೂ ತಂಡಕ್ಕೂ ವಿಭಿನ್ನ ಹೆಸರುಗಳನ್ನು ನೀಡಲಾಗಿದೆ. ಧನರಾಜ್, ಹನುಮಂತ, ಶಿಶಿರ್, ರಜತ್, ಮೋಕ್ಷಿತಾ, ಚೈತ್ರಾ ಒಂದು ತಂಡದಲ್ಲಿದ್ದರೆ, ಐಶ್ವರ್ಯಾ, ಸುರೇಶ್, ತ್ರಿವಿಕ್ರಮ್, ಭವ್ಯ, ಗೌತಮಿ ಮಂಜಣ್ಣ ಮತ್ತೊಂದು ತಂಡದಲ್ಲಿದ್ದಾರೆ. ಯಾವ ತಂಡ ಚೆನ್ನಾಗಿ ಆಡಿದೆ ಎಂಬ ನಿರ್ಧಾರವನ್ನು ಕನ್ನಡಿಗರು ನೀಡಬೇಕಿದೆ. ವೀಕ್ಷಕರ ವೋಟಿಂಗ್‌ಗೆ ಇಲ್ಲಿ ಮಹತ್ವದ್ದಾಗಿದೆ. ನಿನ್ನೆ ನ್ಯೂಸ್ ರೀಡಿಂಗ್ ಮತ್ತು ಅಡುಗೆ ಮಾಡುವ ವಿಭಿನ್ನ ಟಾಸ್ಕ್ಗಳನ್ನು ನೀಡಲಾಗಿತ್ತು. ಇಂದು ಎಸ್ ಅಥವಾ ನೋ ಎಂಬ ಟಾಸ್ಕ್ ನೀಡಲಾಗಿದೆ. ''ಹೂಂ ಅಂತೀಯಾ? ಊಹೂಂ ಅಂತೀಯಾ?'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಪ್ರೋಮೋ ಅನಾವರಣಗೊಂಡಿದೆ.
ಶಿಶಿರ್ ಅವರು ಐಶ್ವರ್ಯಾ ಅವರಿಗೆ ಮೂರು ಹಾಗಲಕಾಯಿ ತಿನ್ನುವಂತೆ ಹೇಳಿದ್ದಾರೆ. ಎಸ್ ಎಂದು ಐಶ್ವರ್ಯಾ ಈ ಸವಾಲು ಸ್ವೀಕರಿಸಿದ್ದಾರೆ. ಕಷ್ಟಪಟ್ಟು ಹಾಗಲಕಾಯಿ ತಿನ್ನುವ ಪ್ರಯತ್ನ ಮಾಡಿದ್ದಾರೆ. ಅವರು ಹಾಗಲಕಾಯಿ ತಿಂದು ವಾಂತಿ ಮಾಡುವ ಪರಿಸ್ಥಿತಿ ತಲುಪಿದ್ದಾರೆ. ಇದನ್ನು ಕಂಡು ಸ್ನೇಹಿತ, ವಿರೋಧಿ ತಂಡದ ಸದಸ್ಯ ಶಿಶಿರ್ ಕಣ್ಣೀರಿಟ್ಟಿದ್ದಾರೆ. ಹಾಗಾಗಿ, ಇದೊಂದು ಭಾವನಾತ್ಮಕ ಕ್ಷಣವಾಗಿತ್ತು.
ಶಿಶಿರ್ ಮತ್ತು ಐಶ್ವರ್ಯಾ ಬಿಗ್ ಬಾಸ್ ಆರಂಭದಿಂದಲೂ ಉತ್ತಮ ಸ್ನೇಹಿತರಾಗಿ ಗುರುತಿಸಿಕೊಂಡಿದ್ದಾರೆ. ಪ್ರೀತಿಯಾಗೋ ಸಾಧ್ಯತೆಗಳಿವೆಯಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದ್ರೆ ಈ ಇಬ್ಬರು ಮಾತ್ರ ಆರಂಭದಿಂದಲೂ ಉತ್ತಮ ಸ್ನೇಹಿತರಾಗಿ, ಕಷ್ಟ ಸುಖದ ಸಂದರ್ಭಗಳಲ್ಲಿ ಹೆಗಲಿಗೆ ಹೆಗಲು ಕೊಟ್ಟು ಬಂದಿದ್ದಾರೆ. ಒಬ್ಬರನ್ನೊಬ್ಬರು ಎಲ್ಲೂ ಬಿಟ್ಟುಕೊಟ್ಟಿಲ್ಲ. ಆದ್ರೀಗ ವಿರೋಧ ತಂಡದಲ್ಲಿ ಆಡುತ್ತಿರುವ ಹಿನ್ನೆಲೆಯಲ್ಲಿ ಟಾಸ್ಕ್ಗೆ ತಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳಬೇಕಿದೆ. ಅಲ್ಲದೇ ಕಳೆದ ವಾರಾಂತ್ಯ ಎಲಿಮಿನೇಷನ್ ಸಂದರ್ಭದಲ್ಲಿ ಇಬ್ಬರೂ ಬಾಟಮ್ ಟುನಲ್ಲಿದ್ದ ಕಾರಣ ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳಬೇಕೆಂದು ಮಾತನಾಡಿಕೊಂಡಿದ್ದರು. ಹಾಗಾಗಿ ಟಾಸ್ಕ್, ಮನರಂಜನೆ ಸೇರಿಸದಂತೆ ಮನೆಯಲ್ಲಿ ಸಾಕಷ್ಟು ಸಕ್ರಿಯರಾಗಿರಲು ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ: 'ಪ್ರೀತಿ ಪಡೆಯಲು ಮತ್ತೆ ಬರುವೆ': ಬಿಗ್ ಬಾಸ್ನಿಂದ ಹೊರಬಂದು ಸುದೀಪ್, ಕನ್ನಡಿಗರಿಗೆ ಶೋಭಾ ಶೆಟ್ಟಿ ಪತ್ರ
ಇನ್ನೂ, ಗೌತಮಿ ಅವರಿಗೆ ಮೆಣಸಿನಕಾಯಿ ತಿನ್ನೋ ಚಾಲೆಂಜ್ ನೀಡಲಾಗಿದೆ. ಮೆಣಸಿನಕಾಯಿ ತಿಂದ ಗೌತಮಿ ಖಾರ ಸಹಿಸಲಾರದೇ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಅವರ ಪರಿಸ್ಥಿತಿ ಕಂಡು ಅಭಿಮಾನಿಗಳು ಮರುಗಿದ್ದಾರೆ.
ಇದನ್ನೂ ಓದಿ: 'ಛತ್ರಪತಿ ಶಿವಾಜಿ ಮಹಾರಾಜ'ರಾಗಿ ಡಿವೈನ್ ಸ್ಟಾರ್: ರಿಷಬ್ ಶೆಟ್ಟಿ ಹೊಸ ಸಿನಿಮಾದ ರಿಲೀಸ್ ಡೇಟ್ ರಿವೀಲ್
'ಧನರಾಜ್ ಬಾಯಲ್ಲಿ ಮನೆ ಮಂದಿಯ ಭವಿಷ್ಯ!' ಕ್ಯಾಪ್ಷನ್ನೊಂದಿಗೆ ಮತ್ತೊಂದು ಪ್ರೋಮೋ ಅನಾವರಣಗೊಂಡಿದ್ದು, ಮನರಂಜನೆಯ ರಸದೌತಣ ಉಣಬಡಿಸುವುದು ಪಕ್ಕಾ ಆಗಿದೆ. ಪ್ರೇಕ್ಷಕರಿಗೆ ಫುಲ್ ಎಂಟರ್ಟೈನ್ಮೆಂಟ್ ಸಿಗಲಿದೆ.