Amla Rice Recipe in Kannada: ನಮ್ಮಲ್ಲಿ ಬಹುತೇಕರು ನೆಲ್ಲಿಕಾಯಿಯಿಂದ ಉಪ್ಪಿನಕಾಯಿಯನ್ನು ತಯಾರಿಸುತ್ತಾರೆ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಈ ಬಾರಿ ನಾವು ನಿಮಗಾಗಿ ಲಂಚ್ ಬಾಕ್ಸ್ ವಿಶೇಷ ರೆಸಿಪಿಯನ್ನು ತಂದಿದ್ದೇವೆ. ಅದುವೇ.. ಸಖತ್ ಟೇಸ್ಟಿಯಾದ ನೆಲ್ಲಿಕಾಯಿ ಅನ್ನ. ನೀವು ಕೆಲವೇ ನಿಮಿಷಗಳಲ್ಲಿ ನೆಲ್ಲಿಕಾಯಿಯಿಂದ ರುಚಿಕರವಾದ ರೈಸ್ ತಯಾರು ಮಾಡಬಹುದು. ಮಕ್ಕಳಿಗೆ ಲಂಚ್ ಬಾಕ್ಸ್ಗಾಗಿ ಈ ಆಮ್ಲಾ ರೈಸ್ ಸಿದ್ಧಪಡಿಸಿ ಕಟ್ಟಿದರೆ, ಡಬ್ಬಿ ಎಲ್ಲಾ ಖಾಲಿ ಮಾಡಿಕೊಂಡು ಬರುತ್ತಾರೆ. ಹಾಗಾದರೆ, ನೆಲ್ಲಾಕಾಯಿ ರೈಸ್ನ್ನು ಸರಳ ಹಾಗೂ ರುಚಿಕರವಾಗಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.
ನೆಲ್ಲಿಕಾಯಿ ರೈಸ್ಗೆ ಬೇಕಾಗುವ ಪದಾರ್ಥಗಳು:
- ಅಕ್ಕಿ - ಕಪ್
- ಎಳ್ಳು - 2 ಟೀಸ್ಪೂನ್
- ಕರಿಮೆಣಸು - ಅರ್ಧ ಟೀಸ್ಪೂನ್
- ಅರಿಶಿನ - ಕಾಲು ಟೀಚಮಚ
- ನೆಲ್ಲಿಕಾಯಿ - 5
- ಉಪ್ಪು - ರುಚಿಗೆ ತಕ್ಕಷ್ಟು
- ಎಳ್ಳಿನ ಎಣ್ಣೆ - ಎರಡೂವರೆ ಟೀಸ್ಪೂನ್
- ಶೇಂಗಾ - 3 ಟೀಸ್ಪೂನ್
- ಸಾಸಿವೆ - 1 ಟೀಸ್ಪೂನ್
- ಉದ್ದಿನಬೇಳೆ- 1 ಟೀಸ್ಪೂನ್
- ಹಸಿ ಕಡಲೆಬೇಳೆ - 1 ಟೀಸ್ಪೂನ್
- ಜೀರಿಗೆ - 1 ಟೀಸ್ಪೂನ್
- ಹಸಿಮೆಣಸಿನಕಾಯಿ - 2
- ಒಣಮೆಣಸಿನ - 2
- ಕರಿಬೇವಿನ ಎಲೆಗಳು - ಎರಡು
- ಒಂದು ಚಿಟಿಕೆ ಇಂಗು
- ಸಾಂಬಾರ್ ಪುಡಿ - ಅರ್ಧ ಟೀಸ್ಪೂನ್
ನೆಲ್ಲಿಕಾಯಿ ರೈಸ್ ತಯಾರಿಸುವ ವಿಧಾನ:
- ಮೊದಲು ಅಕ್ಕಿಯನ್ನು ಎರಡು ಅಥವಾ ಮೂರು ಬಾರಿ ನೀರಿನಲ್ಲಿ ತೊಳೆಯಿರಿ. ನಂತರ ನೆಲ್ಲಿಕಾಯಿ ಸ್ವಚ್ಛಗೊಳಿಸಿ ಪಕ್ಕಕ್ಕೆ ಇಡಿ.
- ಈಗ ಕುಕ್ಕರ್ ತೆಗೆದುಕೊಂಡು ಅದಕ್ಕೆ ತೊಳೆದ ಅಕ್ಕಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಅರಿಶಿನ ಮತ್ತು ಎರಡು ಕಪ್ ನೀರು ಹಾಕಿ ಒಲೆಯ ಮೇಲೆ ಇಡಬೇಕು. ಹೆಚ್ಚಿನ ಉರಿಯಲ್ಲಿ ಸ್ಟವ್ ಇಟ್ಟು ಮೂರು ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
- ನಂತರ ಸ್ಟವ್ ಆಫ್ ಮಾಡಿ ಮತ್ತು ಹಬೆ ಹೋದ ನಂತರ, ಮುಚ್ಚಳ ತೆರೆಯಿರಿ. ಅಕ್ಕಿ ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
- ಈಗ ಒಲೆ ಆನ್ ಮಾಡಿ ಹಾಗೂ ಪಾತ್ರೆ ಇಡಿ. ಇದರೊಳಗೆ ಕರಿಮೆಣಸು ಹಾಗೂ ಎಳ್ಳು ಸೇರಿಸಿ ಹುರಿಯಿರಿ. ತಣ್ಣಗಾದ ನಂತರ ಸ್ವಲ್ಪ ಒರಟಾಗಿ ರುಬ್ಬಿ ತಟ್ಟೆಗೆ ತೆಗೆದುಕೊಳ್ಳಿ.
- ನಂತರ ಒಲೆಯ ಮೇಲೆ ಬಾಣಲೆಯನ್ನು ಇಡಿ 2 ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
- ಎಣ್ಣೆ ಬಿಸಿಯಾದ ನಂತರ ಸಾಸಿವೆ, ಶೇಂಗಾ, ಹಸಿಕಡಲೆ ಬೇಳೆ ಹಾಕಿ ಮಧ್ಯಮ ಉರಿಯಲ್ಲಿ ಕೆಂಪಗೆ ಆಗುವಂತೆ ಹುರಿದುಕೊಳ್ಳಿ.
- ಒಣ ಕೆಂಪು ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ ಮತ್ತು ಜೀರಿಗೆ ಸೇರಿಸಿ ಹಾಗೂ ಫ್ರೈ ಮಾಡಿ.
- ಜೊತೆಗೆ ಇಂಗು ಹಾಗೂ ಕರಿಬೇವಿನ ಸೊಪ್ಪು ಹಾಕಿ ಹುರಿದುಕೊಳ್ಳಿ. ಈಗ ಸಾಂಬಾರ್ ಪುಡಿಯನ್ನು ಸೇರಿಸಿ ಹಾಗೂ ಕೇವಲ 30 ಸೆಕೆಂಡುಗಳ ಕಾಲ ಬಿಸಿ ಮಾಡಿ. ಬಳಿಕ ಸ್ಟವ್ ಆಫ್ ಮಾಡಿ.
- ಈಗ ಅದಕ್ಕೆ ರುಬ್ಬಿದ ಎಳ್ಳು ಹಾಗೂ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.
- ಜೊತೆಗೆ ತುರಿದ ನೆಲ್ಲಿಕಾಯಿಯ ಮಿಶ್ರಣ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. (ಈ ಸಮಯದಲ್ಲಿ ಸ್ಟೌವ್ ಆಫ್ ಮಾಡಬೇಕು.)
- ಈಗ ಸಿದ್ಧವಾಗಿರುವ ಅನ್ನಕ್ಕೆ ಈ ಒಗ್ಗರಣೆಯನ್ನು ಹಾಕಿ ಚೆನ್ನಾಗಿ ಕಲಸಿ. (ರೈಸ್ಗೆ ಹುಳಿ ಕಡಿಮೆಯಾಗಿದೆ ಎಂದು ನಿಮಗೆ ಅನಿಸಿದರೆ, ನೀವು ಸ್ವಲ್ಪ ಹೆಚ್ಚು ತುರಿದ ನೆಲ್ಲಿಕಾಯಿ ಸೇರಿಸಿಕೊಳ್ಳಿ)
- ಹೀಗೆ ಮಾಡಿದರೆ ಸಾಕು ತುಂಬಾ ರುಚಿಕರವಾದ ನೆಲ್ಲಿಕಾಯಿ ರೈಸ್ ಸಿದ್ಧವಾಗುತ್ತದೆ.