ಜಾನುವಾರುಗಳನ್ನು ಮಾರುಕಟ್ಟೆಗೆ ಸಾಗಿಸಲು ನದಿಯಲ್ಲಿ ಇವರ ಹರಸಾಹಸ ನೋಡಿ! - river transportation
🎬 Watch Now: Feature Video
ನಾಗಾರ್ಕರ್ನೂಲ್ (ತೆಲಂಗಾಣ): ಜಿಲ್ಲೆಯಲ್ಲಿ ದನಗಳನ್ನು ದೋಣಿಗೆ ಕಟ್ಟಿ ನೀರಿನಲ್ಲೇ ತೇಲಿಸಿಕೊಂಡು ಹೋದ ಘಟನೆ ನಡೆದಿದೆ. ನದಿಯ ಇನ್ನೊಂದು ಬದಿಯಲ್ಲಿರುವ ಮಾರುಕಟ್ಟೆಗೆ ಕೊಂಡೊಯ್ಯಲು ಜನ ನದಿ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಜನರು ದೋಣಿಯಲ್ಲಿ ಪ್ರಯಾಣಿಸುತ್ತಾ ದನಗಳನ್ನು ನೀರಿನಲ್ಲಿ ಎಳೆಯುತ್ತಿದ್ದಾರೆ. ಇಲ್ಲಿ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಮೂಕ ಜೀವಿಗಳು ಅಪಾಯಕಾರಿ ಪರಿಸ್ಥಿತಿಯಲ್ಲಿ ನದಿಯನ್ನು ದಾಟುತ್ತಿವೆ. ರಸ್ತೆಯ ಮೂಲಕ ಪ್ರಯಾಣಿಸಲು ಸುಮಾರು 200 ಕಿ.ಮೀ. ಪ್ರಯಾಣಿಸಬೇಕಾಗುತ್ತದೆ. ಹೀಗಾಗಿ ಹಣ ಹಾಗೂ ಸಮಯ ಉಳಿಸಲು ಜನ ಜಾನುವಾರುಗಳನ್ನು ನದಿಯಲ್ಲೇ ತೇಲಿಸಿಕೊಂಡು ಕೊಂಡೊಯ್ಯುತ್ತಾರಂತೆ.