ETV Bharat / state

ಹಾಸನ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ - MURDER CASE

ನಡುರಸ್ತೆಯಲ್ಲೇ ವ್ಯಕ್ತಿಯೋರ್ವನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ, ಕೊಲೆಗೈದ ಘಟನೆ ಹಾಸನ ಜಿಲ್ಲೆಯ ಕುಂಬಾರಹಳ್ಳಿ ಗ್ರಾಮದಲ್ಲಿ ನಡೆದಿದೆ.

MURDER CASE
ಸಾಂದರ್ಭಿಕ ಚಿತ್ರ (File)
author img

By ETV Bharat Karnataka Team

Published : Jan 17, 2025, 1:55 PM IST

ಹಾಸನ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ. ನಂಜುಂಡೇಗೌಡ ಅಲಿಯಾಸ್ ಲೋಕೇಶ್ (44) ಕೊಲೆಯಾದ ವ್ಯಕ್ತಿ. ತಾಲೂಕಿನ ಕುಂಬಾರಹಳ್ಳಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ.

ನಂಜುಂಡೇಗೌಡ ರೈತರಿಂದ ಹಾಲು ಸಂಗ್ರಹ ಮಾಡಿಕೊಂಡು ಡೈರಿಗೆ ಹಾಲು ಹಾಕಲು ಮಹೀಂದ್ರ ಜೀತೋ ವಾಹನದಲ್ಲಿ ತೆರಳುತ್ತಿದ್ದರು. ಹೊಂಚುಹಾಕಿ ಕುಳಿತಿದ್ದ ದುಷ್ಕರ್ಮಿಗಳು ಮರುವನಹಳ್ಳಿ-ಮಡಬ ರಸ್ತೆಯಲ್ಲಿ ನಂಜುಂಡೇಗೌಡ ಬರುತ್ತಿರುವಾಗ ಮೊಳೆ ಇಟ್ಟು ಅವರ ವಾಹನವನ್ನು ಪಂಚರ್ ಮಾಡಿದ್ದಾರೆ. ಪಂಚರ್​ ಆದ ವಾಹನದ ಚಕ್ರವನ್ನು ಪರೀಕ್ಷಿಸಲು ವಾಹನದಿಂದ ಇಳಿದ ಕೂಡಲೇ ನಂಜುಂಡೇಗೌಡನನ್ನು ಸುತ್ತುವರೆದು ಲಾಂಗು ಮಚ್ಚು ಮತ್ತು ಇತರೇ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ.

ತಲೆಯ ಭಾಗ, ಕುತ್ತಿಗೆ, ಸೇರಿದಂತೆ ಎರಡು ಕೈಗಳನ್ನು ತುಂಡರಿಸಿದ ದುಷ್ಕರ್ಮಿಗಳು, ಕೊಲೆ ಬಳಿಕ ಮಾರಕಾಸ್ತ್ರಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಕೊಲೆಯಾದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪತ್ನಿಯಿಂದ ದೂರು ಪಡೆದಿರುವ ಪೊಲೀಸರು, ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಒಂದು ದೂರು, ಮೂರು ಕೊಲೆ ಕೇಸ್ ಭೇದಿಸಿದ ಯಮಕನಮರಡಿ ಪೊಲೀಸರು - ONE COMPLAINT THREE MURDER CASES

ETV Bharat Logo

Copyright © 2025 Ushodaya Enterprises Pvt. Ltd., All Rights Reserved.