ಪುಷ್-ಅಪ್ ಜೊತೆ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಸಖತ್ ಡ್ಯಾನ್ಸ್.. ವಿಡಿಯೋ - ರಾಹುಲ್ ಗಾಂಧಿ ತಮಿಳುನಾಡು
🎬 Watch Now: Feature Video

ಚೆನ್ನೈ: ತಮಿಳುನಾಡಿನ ಸೆಂಟ್ ಜೋಸೆಫ್ ಮೆಟ್ರಿಕ್ಯುಲೇಷನ್ ಕಾಲೇಜ್ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳ ಗಮನ ಸೆಳೆದ ರಾಹುಲ್ ಗಾಂಧಿ, ಪುಷ್-ಅಪ್, ಐಕಿಡೋ ಮಾಡಿ ಗಮನ ಸೆಳೆದರು. ಇದೇ ವೇಳೆ, ಡ್ಯಾನ್ಸ್ ಮಾಡಿ ಎಲ್ಲರ ಮನಗೆದ್ದಿದ್ದಾರೆ. ಇದೇ ವೇಳೆ ತಮಿಳುನಾಡಿನ ಉಸ್ತುವಾರಿ ರಾಜ್ಯದ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಹೆಜ್ಜೆ ಹಾಕಿ ಗಮನ ಸೆಳೆದರು. ತಮಿಳುನಾಡಿನ 234 ಕ್ಷೇತ್ರಗಳ ವಿಧಾನಸಭೆ ಚುನಾವಣೆ ಮುಂದಿನ ತಿಂಗಳ ಎಪ್ರಿಲ್ 6ರಂದು ನಡೆಯಲಿದ್ದು, ಅದಕ್ಕಾಗಿ ವಿವಿಧ ಪಕ್ಷಗಳು ಈಗಾಗಲೇ ಭರದ ಪ್ರಚಾರ ನಡೆಸಿವೆ.
Last Updated : Mar 1, 2021, 3:18 PM IST