thumbnail

ಮಚ್ಚು, ಲಾಂಗ್​ನಿಂದ ಕಳ್ಳರು ಅಟ್ಯಾಕ್​... ವೃದ್ಧ ದಂಪತಿಯ ಆತ್ಮರಕ್ಷಣೆ ಹೇಗಿತ್ತು ಗೊತ್ತಾ!? ವಿಡಿಯೋ...​

By

Published : Aug 13, 2019, 5:10 AM IST

ಈ ವೃದ್ಧ ದಂಪತಿಗಳ ಶೌರ್ಯತನಕ್ಕೆ ಎಂಥವರು ಸಹಾ ಫಿದಾ ಆಗಲೇಬೇಕು. ಇಬ್ಬರು ಮೂಸುಕುದಾರಿಗಳು ಮಚ್ಚು, ಲಾಂಗ್​ ಹಿಡಿದು ದಾಳಿ ನಡೆಸಿದರು. ಆದ್ರೂ ಷನ್ಮುಗವೇಲ್​ ಮತ್ತು ಸೆಂಥಾಮಾರೈ ದಂಪತಿ ಎದೆಗುಂದದೆ ಧೈರ್ಯವಾಗಿಯೇ ಅವರನ್ನು ಎದುರಿಸಿದರು. ಪ್ಲಾಸ್ಟಿಕ್​ ಚೇರ್​ನಿಂದ ಅವರನ್ನು ಹೊಡೆದು ಓಡಿಸಿದರು. ತಮ್ಮ ಪ್ರಾಣದ ಜೊತೆಗೆ ಮನೆಯ ವಸ್ತುಗಳನ್ನು ಸಹ ಕಾಪಾಡಿಕೊಂಡರು. ಈ ಘಟನೆ ತಮಿಳುನಾಡಿ ತಿರುನೆಲ್ವೆಲಿಯಲ್ಲಿ ನಡೆದಿದ್ದು, ವೃದ್ಧ ದಂಪತಿಯ ಸಾಹಸದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ದಂಪತಿ ಧೈರ್ಯಕ್ಕೆ ಫುಲ್​ ಫಿದಾ ಆಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.