ಟೋಲ್ಗೇಟ್ನಲ್ಲಿ ಕಾರು ಅಡ್ಡಗಟ್ಟಿ, ವ್ಯಕ್ತಿಗೆ ಹಲ್ಲೆಗೈದು ದರೋಡೆ: ವಿಡಿಯೋ - ವ್ಯಕ್ತಿ ಮೇಲೆ ಹಲ್ಲೆ ಮಾಡಿ ದರೋಡೆ
🎬 Watch Now: Feature Video

ಮಧ್ಯಪ್ರದೇಶದ ಭಿಂದ್‌ನಲ್ಲಿನ ಫುರ್ಪ್ ಪೊಲೀಸ್ ವ್ಯಾಪ್ತಿಯಲ್ಲಿನ ಟೋಲ್ಗೇಟ್ನಲ್ಲಿ ವ್ಯಕ್ತಿಯ ಮೇಲೆ ಹಲ್ಲೆಗೈದು ದರೋಡೆ ನಡೆಸಲಾಗಿದೆ. ಧುವಪಾಲ್ ಎಂಬಾತ ರಾತ್ರಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ. ಈ ವೇಳೆ ಸ್ಥಳಕ್ಕೆ ಬಂದ ದುಷ್ಕರ್ಮಿಗಳ ತಂಡವು ಕಾರನ್ನು ಸುತ್ತುವರೆದು ಕಾರಿನ ಗಾಜುಗಳನ್ನು ಒಡೆದು, ಹಲ್ಲೆಗೈದು ದರೋಡೆ ನಡೆಸಿದೆ. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.