ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೇಲೆಯೇ ಕಾರು ನುಗ್ಗಿಸಿದ ವ್ಯಕ್ತಿ! - ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೇಲೆ ಕಾರು ನುಗ್ಗಿಸಿದ ವ್ಯಕ್ತಿ
🎬 Watch Now: Feature Video

ಚೆನ್ನೈ: ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸಿರುವ ದೇಶ 21 ದಿನಗಳ ಲಾಕ್ಡೌನ್ ಆದೇಶ ಹೊರಡಿಸಿದ್ದು, ಈ ವೇಳೆ ಚೆಕ್ಪೋಸ್ಟ್ಗಳಲ್ಲಿ ಪೊಲೀಸರು ವಾಹನ ತಡೆಹಿಡಿದು ಮಾಹಿತಿ ಪಡೆದುಕೊಳ್ಳುತ್ತಿದ್ದು, ಅಗತ್ಯ ಇಲ್ಲದ ವಾಹನ ವಾಪಸ್ ಕಳುಹಿಸ್ತಿದ್ದಾರೆ. ಅದೇ ರೀತಿ ತಮಿಳುನಾಡಿನ ಧರ್ಮಪುರಿ-ಕೃಷ್ಣಗಿರಿ ಜಿಲ್ಲೆಯ ಗಡಿ ಬಳಿಯ ಕಡುಚೆಟ್ಟಿಪಟ್ಟಿಯ ಚೆಕ್ಪೋಸ್ಟ್ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರ್ವೊಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೇಲೆ ಹರಿದು ಹೋಗಿದೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.