ಸಾಮಾಜಿಕ ಅಂತರ ಕಾಪಾಡಿ ಮದುವೆ... ವಿಡಿಯೋ ನೋಡಿದ್ರೆ ನೀವು ನಗದೇ ಇರೋಕೆ ಚಾನ್ಸೇ ಇಲ್ಲ!! - ಒಡಿಶಾದ ನಬರಂಗ್ಪುರ್
🎬 Watch Now: Feature Video
ನಬರಂಗ್ಪುರ್(ಒಡಿಶಾ): ದೇಶಾದ್ಯಂತ ಲಾಕ್ಡೌನ್ ಮುಂದುವರಿಕೆಯಾಗಿದೆ. ಇವೆಲ್ಲದರ ಮಧ್ಯೆ ಕೆಲವೊಂದು ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆ ಕಾರ್ಯಗಳು ನಡೆಯುತ್ತಿವೆ. ಇನ್ನು ಒಡಿಶಾದ ನಬರಂಗ್ಪುರ್ ಪ್ರದೇಶದಲ್ಲಿ ನಡೆದಿರುವ ಮದುವೆವೊಂದು ವಿಚಿತ್ರವಾಗಿ ನಡೆದಿದೆ. ಕೊರೊನಾ ಭಯದಿಂದ ಜೋಡಿಯೊಂದು ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ಅದರ ಸಹಾಯದಿಂದ ಹೂವಿನ ಹಾರ ಬದಲಾಯಿಸಿಕೊಂಡು ಗಮನ ಸೆಳೆದಿದೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. 23 ವರ್ಷದ ಗೋವಿಂದ್ ಗುಪ್ತಾ ಹಾಗೂ 20 ವರ್ಷದ ತೃಪ್ತಿಮಯಾ ಈ ರೀತಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಲು ಅಪರೂಪದ ಜೋಡಿಯಾಗಿದೆ