ಬಂಗಾಳದ ಸೆಲೆಬ್ರಿಟಿ ಜೋಡಿ ಟಿಎಂಸಿಗೆ ಸೇರ್ಪಡೆ - ತ್ರಿನಾ ಭಟ್ಟಾಚಾರ್ಯ
🎬 Watch Now: Feature Video
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಇಂದು ಬಂಗಾಳಿ ಕಿರುತೆರೆ ನಟ ನೀಲ್ ಭಟ್ಟಾಚಾರ್ಯ ಮತ್ತು ಅವರ ಪತ್ನಿ, ನಟಿ ತ್ರಿನಾ ಭಟ್ಟಾಚಾರ್ಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಸೇರ್ಪಡೆಯಾದರು. ಟಿಎಂಸಿ ನಾಯಕ ಪಾರ್ಥ ಚಟರ್ಜಿ ಅವರು ಈ ದಂಪತಿಯನ್ನು ಪಕ್ಷಕ್ಕೆ ಬರಮಾಡಿಕೊಂಡರು. ಕಳೆದ ತಿಂಗಳು ಜರುಗಿದ್ದ ನೀಲ್ - ತ್ರಿನಾ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾಲ್ಗೊಂಡು, ದಂಪತಿಗೆ ಶುಭ ಹಾರೈಸಿದ್ದರು.