ಸರ್ಪನ ಜೊತೆ ಜಾಂಬವಂತನ ಕಾದಾಟ,ವೀಕ್ಷಕರ ಮೊಬೈಲ್ನಲ್ಲಿ ಸೆರೆಯಾಯ್ತು ರೋಚಕ ಕ್ಷಣ! - ವರಂಗಲ್ ಹಾವಿನ ಮೇಲೆ ಕರಡಿ ದಾಳಿ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5094678-556-5094678-1573997008614.jpg)
ನೀರಿಗಾಗಿ ಸರ್ಪವೊಂದು ಜಾಂಬವಂತನ ಅಡ್ಡಕ್ಕೆ ತೆರಳಿತ್ತು. ಅದೇ ಸಮಯಕ್ಕೆ ಜಾಂಬವಂತ ನೀರು ಕುಡಿಯಲು ಬಂದಿದೆ. ಸರ್ಪ ನೀರಿನಲ್ಲಿರುವುದು ಕಂಡ ಜಾಂಬವಂತನಿಗೆ ಕೋಪ ಬಂದಿದ್ದು, ಸರ್ಪ ಜೊತೆ ಕರಡಿ ಕಾದಾಟಕ್ಕಿಳಿದಿದೆ. ಪ್ರಾಣ ಕಾಪಾಡಿಕೊಳ್ಳುವುದಕ್ಕಾಗಿ ಹಾವು ಪೊದೆಯಲ್ಲಿ ಅಡಗಿಕೊಳ್ಳುವ ಪ್ರಯತ್ನ ವಿಫಲವಾಗಿದೆ. ಈ ವೇಳೆ ಕರಡಿ ಹಾವನ್ನು ತುಂಡು ತುಂಡಾಗಿ ಕೈ ಮತ್ತು ಬಾಯಿಯಿಂದ ತುಂಡರಿಸಿದೆ. ಈ ಘಟನೆ ತೆಲಂಗಾಣದ ವರಂಗಲ್ನ ಕಾಕತೀಯ ಮೃಗಾಲಯದಲ್ಲಿ ನಡೆದಿದೆ. ಈ ಸನ್ನಿವೇಶ ವೀಕ್ಷಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.