ಬೃಹತ್ ಬಂಡೆಗಳ ಮಧ್ಯೆ ಸಿಲುಕಿದ್ದ ಆನೆ ಮರಿ ರಕ್ಷಿಸಿದ ಸ್ಥಳೀಯರು... ವಿಡಿಯೋ - ಆನೆ ಮರಿ ರಕ್ಷಣೆ ಮಾಡಿದ ಅರಣ್ಯ ಸಿಬ್ಬಂದಿ
🎬 Watch Now: Feature Video
ಅಸ್ಸೋಂ: ಬೃಹತ್ ಬಂಡೆಗಳ ಮಧ್ಯೆ ಸಿಲುಕಿಕೊಂಡಿದ್ದ ಆನೆ ಮರಿಯನ್ನು ರಕ್ಷಣೆ ಮಾಡಿ ಸ್ಥಳೀಯರು ಹಾಗೂ ಅರಣ್ಯ ಸಿಬ್ಬಂದಿ ಮಾನವೀಯತೆ ಮೆರೆದಿರುವ ಘಟನೆ ಅಸ್ಸೋಂನಲ್ಲಿ ನಡೆದಿದೆ. ಮೊರಿಗಾಂವ್ನ ಅರಣ್ಯ ಪ್ರದೇಶದಲ್ಲಿ ಎರಡು ಬಂಡೆಗಳ ನಡುವೆ ಆನೆ ಮರಿ ಸಿಲುಕಿ ಒದ್ದಾಡುತ್ತಿದ್ದ ವೇಳೆ ಕೆಲ ಸ್ಥಳೀಯರು ಅದನ್ನು ರಕ್ಷಣೆ ಮಾಡಿ, ತಾಯಿ ಬಳಿ ಸೇರಿಕೊಳ್ಳುವಂತೆ ಮಾಡಿದ್ದಾರೆ. ಈ ವೇಳೆ ಓರ್ವ ವ್ಯಕ್ತಿ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ.