ಪ.ಬಂಗಾಳದಲ್ಲಿ 2ನೇ ಹಂತ ಮತದಾನ: 17 ಕಚ್ಚಾ ಬಾಂಬ್ ನಿಷ್ಕ್ರಿಯಗೊಳಿಸಿದ ಪೊಲೀಸರು - ಕಚ್ಚಾ ಬಾಂಬ್ ಪತ್ತೆ
🎬 Watch Now: Feature Video
ಪಶ್ಚಿಮ ಮಿಡ್ನಾಪುರ (ಪಶ್ಚಿಮ ಬಂಗಾಳ) : ಪಶ್ಚಿಮ ಬಂಗಾಳದಲ್ಲಿ ಇಂದು ಎರಡನೇ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಬುಧವಾರ ಪಶ್ಚಿಮ ಮಿಡ್ನಾಪೋರ್ ಪೊಲೀಸ್ ಮತ್ತು ಬಾಂಬ್ ವಿಲೇವಾರಿ ದಳದವರು 17 ಕಚ್ಚಾ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಕಚ್ಚಾ ಬಾಂಬ್‌ಗಳನ್ನು ಕೇಶಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಾರ್ಕಾ ಗ್ರಾಮದಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಇಂದು ನಂದಿಗ್ರಾಮ ಸೇರಿದಂತೆ 30 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.