ಬಾವಿಗೆ ಬಿದ್ದ ಮರಿ ಆನೆ ರಕ್ಷಿಸಿದ ಸಿಬ್ಬಂದಿ: ವಾಹನ ಜಖಂಗೊಳಿಸಿದ ಗಜಪಡೆ! - ಮರಿ ಆನೆ ರಕ್ಷಸಿದ ಸಿಬ್ಬಂದಿ
🎬 Watch Now: Feature Video
ಬರಿಪದ(ಒಡಿಶಾ): ಐದು ಗಂಟೆಗಳ ಕಾರ್ಯಾಚರಣೆ ನಂತರ ಮರಿ ಆನೆಯನ್ನು ಬಾವಿಯಿಂದ ರಕ್ಷಿಸಲಾಗಿದೆ. ಶನಿವಾರ ಮಯೂರ್‌ಭಂಜ್ ಜಿಲ್ಲೆಯ ರಸ್ಗೋಬಿಂದ್‌ಪುರ ವ್ಯಾಪ್ತಿಯ ಚಕುಂದಪಾದ ಗ್ರಾಮದಲ್ಲಿ ಈ ಆನೆ ಮರಿ ಬಾವಿಗೆ ಬಿದ್ದಿತ್ತು. ಕಳೆದ ಕೆಲ ದಿನಗಳಿಂದ 15 ಆನೆಗಳ ಹಿಂಡು ಈ ಪ್ರದೇಶದಲ್ಲಿ ಬೀಡು ಬಿಟ್ಟಿದ್ದು, ಆಹಾರ ಅರಸಿ ನಿನ್ನೆ ಚಾಕುಂದಪದ ಗ್ರಾಮಕ್ಕೆ ನುಗ್ಗಿದ್ದವು. ಈ ವೇಳೆ ಆನೆ ಮರಿ ಬಾವಿಗೆ ಬಿದ್ದಿದೆ. ಅರಣ್ಯ ಇಲಾಖೆಯ ಎರಡು ತಂಡಗಳು, ಅಗ್ನಿಶಾಮಕ ದಳ ಆನೆ ಮರಿಯನ್ನು ರಕ್ಷಿಸಲು ಮುಂದಾಗುವಾಗ ಹಿಂಡಾನೆ ದಾಳಿ ಮಾಡಲು ಮುಂದಾಗಿದ್ದವು. ಕೊನೆಗೂ ಸಿಬ್ಬಂದಿ ಆನೆಯನ್ನು ರಕ್ಷಣೆ ಮಾಡಿದ್ದಾರೆ. ಆದರೂ ಈ ವೇಳೆ ಆನೆಗಳು ಸಿಬ್ಬಂದಿ ವಾಹನವನ್ನು ನಜ್ಜುಗುಜ್ಜು ಮಾಡಿವೆ.
TAGGED:
ಮರಿ ಆನೆ ರಕ್ಷಸಿದ ಸಿಬ್ಬಂದಿ