ಸರ್ದಾರ್‌ಗಳಿಗೆ ಸಿಂಗರ್ ಸಹಾಯ.. ಪ್ರತಿಭಟನೆಗೆ ನಟ ದಿಲ್ಜಿತ್ ಸಾಥ್.. ಅನ್ನದಾತರಿಗಾಗಿ ₹1 ಕೋಟಿ ದೇಣಿಗೆ.. - ಸಿಂಘು ಗಡಿಯಲ್ಲಿ ಪ್ರತಿಭಟನಾನಿರತ ರೈತರನ್ನು ಭೇಟಿಯಾದ ದಿಲ್ಜಿತ್
🎬 Watch Now: Feature Video

ನವದೆಹಲಿ : ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆಗೆ ಹಿಂದಿ ಮತ್ತು ಪಂಜಾಬಿ ಚಿತ್ರರಂಗದ ಪ್ರಸಿದ್ಧ ನಟ, ಗಾಯಕ ದಿಲ್ಜಿತ್ ದೋಸಾಂಜ್ ಸಾಥ್ ನೀಡಿದ್ದಾರೆ. ಸಿಂಘು ಗಡಿಯಲ್ಲಿ (ದೆಹಲಿ-ಹರಿಯಾಣ ಗಡಿ ಪ್ರದೇಶ) ಪ್ರತಿಭಟನಾನಿರತ ರೈತರನ್ನು ಭೇಟಿಯಾದ ದಿಲ್ಜಿತ್, ತೀವ್ರ ಚಳಿಯಲ್ಲೂ ಹಗಲು-ರಾತ್ರಿ ಹೋರಾಟ ನಡೆಸುತ್ತಿರುವ ಅನ್ನದಾತರು ಬೆಚ್ಚನೆಯ ಉಡುಪು, ಹೊದಿಕೆ ತೆಗೆದುಕೊಳ್ಳಲೆಂದು 1 ಕೋಟಿ ರೂ. ನೆರವು ನೀಡಿದ್ದಾರೆ.