ಹೊಟ್ಟೆಗೆ ಕೂಳಿಲ್ಲದೇ ಪರದಾಟ... ಗರ್ಭಿಣಿ ಪತ್ನಿಯನ್ನ 425 ಕಿ.ಮೀ ಬೈಸಿಕಲ್​ನಲ್ಲೇ ಕರೆದೊಯ್ದ ವೀರ..! - ಕೊರೊನಾ

🎬 Watch Now: Feature Video

thumbnail

By

Published : May 14, 2020, 5:54 PM IST

ಕೊರೊನಾ ಇಡೀ ಜಗತ್ತನೇ ನಡುಗಿಸುತ್ತಿರುವಂತಹ ಒಂದು ಸೂಕ್ಷ್ಮ ವೈರಾಣು. ಅದರ ತಡೆಗಟ್ಟುವಿಕೆಗೆ ದೇಶಾದ್ಯಂತ ಲಾಕ್​ಡೌನ್​ ಹೇರಲಾಗಿದೆ. ಆದ್ರೆ ಇಲ್ಲಿ ವ್ಯಥೆ ಪಟ್ಟವರಲ್ಲಿ ವಲಸೆ ಕಾರ್ಮಿಕರ ಪಾಲು ದೊಡ್ಡದು. ಈ ವಿಡಿಯೋ ನೋಡಿ. ಮಧ್ಯಪ್ರದೇಶದ ಈತ ಜೈಪುರದಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದ. ಲಾಕ್​ಡೌನ್​ ಕಾರಣದಿಂದಾಗಿ ಊಟಕ್ಕೆ ಗತಿ ಇಲ್ಲದೇ ಪರದಾಡುವ ಸ್ಥಿತಿ ಎದುರಾಯಿತು. ಜೊತೆಗೆ ತನ್ನ ತುಂಬು ಗರ್ಭಿಣಿ ಹೆಂಡತಿ. ದಿಕ್ಕು ಕಾಣದ ಕುಟುಂಬ ಜೈಪುರ್​ ಬಿಟ್ಟು ತನ್ನೂರು ಗುನಾಗೆ ಮರಳಿ ಬರುವ ಯೋಜನೆ ಹಾಕಿಕೊಂಡಿತು. ಗುನಾ ರಾಜಸ್ಥಾನದಿಂದ ಸುಮಾರು 425 ಕಿ.ಮೀ ದೂರ ಇದೆ. ಅಲ್ಲಿಂದ ಬರಲು ಯಾವುದೇ ವಾಹನ ಸೌಲಭ್ಯ ಇಲ್ಲದಾಯಿತು. ಪತ್ನಿ ತುಂಬು ಗರ್ಭಿಣಿಯಾಗಿದ್ದರಿಂದ ಆಕೆಗೆ ನಡೆಯುವುದೂ ಕಷ್ಟಕರವಾಗಿತ್ತು. ಆಗ ಹಳೇ ಸೈಕಲ್​ಗೆ ಹೆಚ್ಚಿನ ಹಣ ತೆತ್ತು ತನ್ನ ಗರ್ಭಿಣಿ ಪತ್ನಿಯನ್ನು ಬೈಸಿಕಲ್​ನಲ್ಲಿ ಕರೆದುಕೊಂಡು ಬರುತ್ತಿದ್ದಾನೆ. ಈತನಂತೆ ಇನ್ನೂ ಅನೇಕರು ಇಂತಹ ಸಂದಿಗ್ದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.