ಗುಜರಿ ಗೋದಾಮಿಗೆ ತಗುಲಿದ ಬೆಂಕಿ... 40ಕ್ಕೂ ಹೆಚ್ಚು ಜನರನ್ನು ಕಾಪಾಡಿದ ದೇವತೆ! - woman 40 rescued from building where fire broke out,

🎬 Watch Now: Feature Video

thumbnail

By

Published : Dec 26, 2019, 7:23 PM IST

Updated : Dec 26, 2019, 10:48 PM IST

ಪೂರ್ವ ದೆಹಲಿಯ ಕೃಷ್ಣ ನಗರದಲ್ಲಿರುವ ಗುಜರಿ ಗೋದಾಮುವೊಂದಕ್ಕೆ ಬೆಂಕಿ ತಗುಲಿದ್ದು, ಸುಮಾರು 40ಕ್ಕೂ ಹೆಚ್ಚು ಜನರನ್ನು ಮಹಿಳೆಯೊಬ್ಬಳು ಕಾಪಾಡಿದ್ದಾರೆ. ಇಂದು ಬೆಳಗ್ಗೆ 2:10 ಗಂಟೆಗೆ ನಾಲ್ಕು ಅಂತಸ್ತಿನ ಕಟ್ಟಡದ ಕೆಳಭಾಗದಲ್ಲಿ ಪ್ಲಾಸ್ಟಿಕ್​ ಗುಜರಿ ಗೋದಾಮುವಿಗೆ ಬೆಂಕಿ ತಗುಲಿತ್ತು. ಈ ವೇಳೆ, ಕಟ್ಟಡದ ಪಕ್ಕದಲ್ಲಿ ವಾಸಿಸುತ್ತಿದ್ದ ಮಹಿಳೆಗೆ ಎಚ್ಚರವಾಗಿದ್ದು, ಹೊರ ಬಂದು ನೋಡಿದಾಗ ಬೆಂಕಿ ಹೊತ್ತಿ ಉರಿಯುತ್ತಿದ್ದನ್ನು ಕಂಡು ಕೂಡಲೇ ಕಟ್ಟಡದ ಮೇಲೇರಿ ಎಲ್ಲರನ್ನು ಎಚ್ಚರಿಸಿದ್ದಾರೆ. ಬಳಿಕ ಬಿಲ್ಡಿಂಗ್​ನಲ್ಲಿ ವಾಸಿಸುತ್ತಿದ್ದ ನಿವಾಸಿಗಳು ಕೂಡಲೇ ಕೆಳಗಿಳಿದು ಸುರಕ್ಷಿತ ಸ್ಥಳಕ್ಕೆ ತೆರಳಿದರು. ಸುದ್ದಿ ತಿಳಿದ ಅಗ್ನಿಶಾಮಕ ದಳ ಐದು ವಾಹನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿತ್ತು. ಈ ಘಟನೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated : Dec 26, 2019, 10:48 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.