ಮಕ್ಕಳ ಕಳ್ಳಿಯರೆಂದು, ಹಗ್ಗ ಮಾರಲು ಬಂದ ಮಹಿಳೆಯರಿಗೆ ಹಿಗ್ಗಾ ಮುಗ್ಗ ಥಳಿಸಿದ ಜನ - ಐವರು ಮಹಿಳೆಯರ ಮೇಲೆ ಹಲ್ಲೆ
🎬 Watch Now: Feature Video
ಶಾಮಲಿ(ಉತ್ತರಪ್ರದೇಶ): ಹಗ್ಗ ಮಾರಲು ಬಂದಿದ್ದ ಐವರು ಗುಜರಾತಿ ಮಹಿಳೆಯರನ್ನು ಮಕ್ಕಳ ಕಳ್ಳಿಯರೆಂದು ಆರೋಪಿಸಿ ಪೊಲೀಸರ ಸಮ್ಮುಖದಲ್ಲಿ ಸಾರ್ವಜನಿಕರು ಹಲ್ಲೆ ಮಾಡಿರುವ ಘಟನೆ ಶಾಮಲಿ ಜಿಲ್ಲೆಯ ಕೌರಾಣ್ ಥಾಭಣಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲ ದಿನಗಳಿಂದ ಇಲ್ಲಿ ಮಕ್ಕಳನ್ನು ಹೊತ್ತೊಯ್ಯಲಾಗುತ್ತಿದೆ ಎಂಬ ವಿಡಿಯೋ ವೈರಲ್ ಆಗಿತ್ತು. ಮಕ್ಕಳನ್ನು ಇವರೇ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಜನರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.