ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಿವಾಸದಲ್ಲಿ ಬ್ಲಾಕ್ ಕೋಬ್ರಾ - ರಾಜಸ್ಥಾನದ ಕೋಟಾದಲ್ಲಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಿವಾಸ
🎬 Watch Now: Feature Video
ಕೋಟಾ: ರಾಜಸ್ಥಾನದ ಕೋಟಾದಲ್ಲಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ನಿವಾಸದ ಬಾತ್ರೂಂನಲ್ಲಿ ನಿನ್ನೆ ರಾತ್ರಿ ಕರಿನಾಗರ ಹಾವು ಅಡಗಿ ಕುಳಿತಿತ್ತು. ಓಂ ಬಿರ್ಲಾ ಅವರ ಪಿಎ ಹರಿ ನಂದನ್ ಉರಗ ರಕ್ಷಕ ಸ್ನೇಕ್ ಗೋವಿಂದ್ ಶರ್ಮಾ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಗೋವಿಂದ್ ಶರ್ಮಾ ಸುಮಾರು ಎರಡು ಗಂಟೆಗಳ ಬಳಿಕ 5 ಅಡಿ ಉದ್ದದ ಬ್ಲಾಕ್ ಕೋಬ್ರಾವನ್ನು ಸೆರೆ ಹಿಡಿದು, ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.