ಆಸ್ಟ್ರೇಲಿಯಾ ಕಾಡ್ಗಿಚ್ಚು : 30 ಮನೆಗಳು ಭಸ್ಮ, 60 ಕಿ.ಮೀ ವ್ಯಾಪಿಸಿದ ಅಗ್ನಿ - ಆಸ್ಟ್ರೇಲಿಯಾ ಕಾಡಿಗೆ ಬೆಂಕಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10475777-229-10475777-1612274969150.jpg)
ಪರ್ತ್(ಆಸ್ಟ್ರೇಲಿಯಾ): ವೆಸ್ಟರ್ನ್ ಆಸ್ಟ್ರೇಲಿಯಾ ರಾಜ್ಯದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಭಯಾನಕ ಕಾಡ್ಗಿಚ್ಚಿನ ಕುರಿತು ಮಾಹಿತಿ ನೀಡಿದ್ದು, ಪಶ್ಚಿಮ ಕರಾವಳಿ ನಗರ ಪರ್ತ್‍ನ ಈಶಾನ್ಯಕ್ಕೆ ನಿಯಂತ್ರಣಕ್ಕೆ ಬಾರದ ಕಾಡ್ಗಿಚ್ಚು 30 ಮನೆಗಳನ್ನು ಸುಟ್ಟು ಭಸ್ಮ ಮಾಡಿದೆ. ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಅನೇಕ ಸ್ಥಳೀಯರುವ ಬೇರೆಡೆಗೆ ತೆರಳಲು ಸಿದ್ಧರಾಗಿದ್ದಾರೆ. ಕಾಡ್ಗಿಚ್ಚು 60 ಕಿಲೋ ಮೀಟರ್ ಪ್ರದೇಶದಲ್ಲಿ ವ್ಯಾಪಿಸಿದೆ. ಮುಂಡರಿಂಗ್, ಚಿಟ್ಟರಿಂಗ್, ನಾರ್ಥಮ್ ಹಾಗೂ ಸ್ವಾನ್ ನಗರದ ಮೇಲೂ ಪ್ರಭಾವ ಬೀರಿದೆ. ಪಶ್ಚಿಮ ಆಸ್ಟ್ರೇಲಿಯಾದ ಅಗ್ನಿ ಮತ್ತು ತುರ್ತು ಸೇವಾ ವರದಿ ಪ್ರಕಾರ 6667 ಹೆಕ್ಟೇರ್ಗಳಲ್ಲಿ ಅಗ್ನಿ ವ್ಯಾಪಿಸಿದೆ ಎಂದು ತಿಳಿಸಿದೆ.