ಸೋಂಕಿಗೆ ಸೆಡ್ಡು ಹೊಡೆದು 101ನೇ ಬರ್ತ್‌ಡೇ ಆಚರಿಸಿ, ಆಸ್ಪತ್ರೆಯಿಂದ ಡಿಸ್ಚಾರ್ಜ್‌ಗೆ ಸಿದ್ಧನಾದ ವೃದ್ಧ! - 101 ವರ್ಷದ ವೃದ್ಧ
🎬 Watch Now: Feature Video
ಮುಂಬೈ: ಮಹಾರಾಷ್ಟ್ರದಲ್ಲಿ ಪ್ರತಿದಿನ ನೂರಾರು ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ. ಆದರೆ 101 ವರ್ಷದ ಅರ್ಜುನ್ ಗೋವಿಂದ್ ಹೆಮ್ಮಾರಿ ವಿರುದ್ಧ ಹೋರಾಡಿ ಗೆಲುವು ಸಾಧಿಸಿದ್ದಾರೆ. ಇದರ ಜೊತೆಗೆ ತಮ್ಮ ಹುಟ್ಟುಹಬ್ಬವನ್ನೂ ಆಚರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಆಗಲು ಸಜ್ಜಾಗಿ ನಿಂತಿದ್ದಾರೆ. ನಿನ್ನೆ ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಆಸ್ಪತ್ರೆ ಸಿಬ್ಬಂದಿ ಇವರ 101ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದರು.