ಉಕ್ರೇನ್ನಲ್ಲಿ ಸಿಲುಕಿರುವ ತುಮಕೂರಿನ ವಿದ್ಯಾರ್ಥಿ.. ಕುಟುಂಬಸ್ಥರು ಹೇಳೋದೇನು? - ಉಕ್ರೇನ್ನಲ್ಲಿ ತುಮಕೂರಿನ ಸಂಪತ್
🎬 Watch Now: Feature Video
ತುಮಕೂರು: ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಕೆಲಸ ಆಗುತ್ತಿದೆ. ಆದರೆ ತುಮಕೂರು ಮೂಲದ ಸಂಪತ್ ಎನ್ನುವ ವಿದ್ಯಾರ್ಥಿಗೆ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ಆತನ ಪೋಷಕರು ಆರೋಪಿಸಿದ್ದಾರೆ. ಅಧಿಕಾರಿಗಳು ಸಂಪತ್ನನ್ನು ಸಂಪರ್ಕಿಸಿದ್ದರೆ ಇಷ್ಟೊತ್ತಿಗಾಗಲೇ ಭಾರತಕ್ಕೆ ಪ್ರಯಾಣ ಬೆಳೆಸುತ್ತಿದ್ದನು. ಯುದ್ಧ ನಡೆಯುತ್ತಿರುವ ಪ್ರದೇಶದಲ್ಲೇ ಸಂಪತ್ ಇದ್ದಿದ್ದರಿಂದ ಸರ್ಕಾರವನ್ನೂ ಸಹ ನಾವು ದೂರಲು ಸಾಧ್ಯವಿಲ್ಲ. ಇನ್ನು ನವೀನ್ ಎಂಬ ವಿದ್ಯಾರ್ಥಿ ಮೃತಪಟ್ಟ ನಂತರ ರಾಯಭಾರಿ ಕಚೇರಿ ಅಧಿಕಾರಿಗಳು ತಕ್ಷಣ ಸ್ಪಂದಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಖಾರ್ಕಿವ್ ನಗರವನ್ನು ಬಿಟ್ಟು ತಕ್ಷಣ ಹೊರಬರುವಂತೆ ತಿಳಿಸಿದ್ದಾರೆ. ಸಂಪತ್ ತಾನಿರುವ ಜಾಗದಿಂದ ಹೊರಟಿದ್ದಾನೆ ಎಂದು ಸಂಪತ್ ಸಹೋದರ ಸಂತೋಷ್ ತಿಳಿಸಿದರು.
Last Updated : Feb 3, 2023, 8:18 PM IST