ಅಪರೂಪದ ರಣಹದ್ದು ಪತ್ತೆ: ಪ್ರಾಣಿ ಸಂಗ್ರಹಾಲಯಕ್ಕೆ ಸ್ಥಳಾಂತರ - ಈಟಿವಿ ಭಾರತ ಕನ್ನಡ
🎬 Watch Now: Feature Video

ಜಾಜ್ಪುರ/ಒಡಿಶಾ: ಜಿಲ್ಲೆಯ ಬ್ಯಾರಿ ಬ್ಲಾಕ್‌ನ ನಿಲ್ಪಾಡಾ ಗ್ರಾಮದಲ್ಲಿ ಅಪರೂಪದ ರಣಹದ್ದೊಂದು ಪತ್ತೆಯಾಗಿದೆ. ಬುಧವಾರ ಸಂಜೆ ನಿಲ್ಪಾಡಾ ಗ್ರಾಮದ ಹೊಲವೊಂದರಲ್ಲಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ರಣಹದ್ದು ಪತ್ತೆಯಾಗಿತ್ತು. ಇದನ್ನು ಕಂಡ ಗ್ರಾಮಸ್ಥರು ಕೂಡಲೇ ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ರಣಹದ್ದನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಅದಕ್ಕೆ ಚಿಕಿತ್ಸೆ ನೀಡಿ ನಂದನ್ಕನನ್ ಪ್ರಾಣಿ ಸಂಗ್ರಹಾಲಯಕ್ಕೆ ಕಳುಹಿಸಿದ್ದಾರೆ ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ.
Last Updated : Feb 3, 2023, 8:34 PM IST