ಕೋಳಿ, ಟಗರು, ಗೂಳಿ ಕಾಳಗ ಆಯ್ತು, ಈಗ ಹೊಸ ಟ್ರೆಂಡ್ ಹಂದಿ ಕಾಳಗ! - ಹಂದಿ ಕಾದಾಟ ಟ್ರೆಂಡ್
🎬 Watch Now: Feature Video
ಆಂಧ್ರಪ್ರದೇಶ ಸೇರಿದಂತೆ ಇತರ ಕೆಲ ರಾಜ್ಯಗಳಲ್ಲಿ ಸಂಕ್ರಾಂತಿ ಸಮಯದಲ್ಲಿ ನಡೆಯುವ ಕೋಳಿ ಕಾಳಗ, ಟಗರು ಕಾಳಗ, ಗೂಳಿ ಕಾಳಗಗಳ ಬಗ್ಗೆ ಜನರಿಗೆ ಅರಿವಿದೆ. ಆದರೆ ಈಗ ಹೊಸ ಟ್ರೆಂಡ್ ಶುರುವಾಗಿದೆ. ಆಂಧ್ರದ ಏಲೂರು ಜಿಲ್ಲೆಯ ದ್ವಾರಕಾ ತಿರುಮಲದಲ್ಲಿ ಹಂದಿ ಕಾಳಗ ನಡೆಸಲಾಗಿದೆ. ಈ ಪೈಪೋಟಿ ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಅಖಾಡಕ್ಕಿಳಿದ ಎರಡು ಹಂದಿಗಳಲ್ಲಿ ಓಡಿಹೋಗದೆ ಹೆಚ್ಚು ಹೊತ್ತು ಕಾದಾಡುವ ಹಂದಿಯನ್ನು ಸಂಘಟಕರು ವಿಜೇತರೆಂದು ಘೋಷಿಸಿದರು. ರಾಜಮಂಡ್ರಿಯ ಹಂದಿ ಸ್ಪರ್ಧೆಯಿಂದ ಓಡಿ ಹೋಗಿದ್ದು, ದ್ವಾರಕಾ ತಿರುಮಲದ ಹಂದಿಯನ್ನು ವಿಜೇತ ಎಂದು ಘೋಷಿಸಲಾಯಿತು.
Last Updated : Feb 3, 2023, 8:23 PM IST