ಬಾಲಕಿಯ ಹೊಟ್ಟೆಯಿಂದ ಒಂದು ಕೆಜಿಗೂ ಅಧಿಕ ಕೂದಲು ಹೊರತೆಗೆದ ವೈದ್ಯರು

🎬 Watch Now: Feature Video

thumbnail

ಗುಡಿವಾಡ (ಆಂಧ್ರಪ್ರದೇಶ): ಬಾಲಕಿಯ ಹೊಟ್ಟೆಯಲ್ಲಿದ್ದ ಒಂದು ಕೆಜಿಗೂ ಅಧಿಕ ಕೂದಲನ್ನು ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಹೊರತೆಗೆದಿರುವ ಘಟನೆ ಕೃಷ್ಣಾ ಜಿಲ್ಲೆಯ ಗುಡಿವಾಡದ ಶ್ರೀರಾಮ ನರ್ಸಿಂಗ್ ಹೋಮ್ ನಲ್ಲಿ ನಡೆದಿದೆ.

14 ವರ್ಷದ ಬಾಲಕಿಯೋರ್ವಳು ಅನ್ನ ತಿನ್ನದೇ ಪದೇ ಪದೇ ವಾಂತಿ ಮಾಡಿಕೊಳ್ಳುತ್ತಿದ್ದಳು. ಈ ಹಿನ್ನೆಲೆ ಬಾಲಕಿಯ ಪೋಷಕರು 15 ದಿನಗಳ ಹಿಂದೆ ನಗರದ ನರ್ಸಿಂಗ್ ಹೋಂಗೆ ಕರೆತಂದಿದ್ದರು. ಈ ವೇಳೆ ವೈದ್ಯ ಪೊಟ್ಲೂರಿ ವಂಶಿಕೃಷ್ಣ ಅವರು ಬಾಲಕಿಯನ್ನು ಪರೀಕ್ಷಿಸಿದಾಗ ಆಕೆಗೆ ಕೂದಲು ತಿನ್ನುವ ಹವ್ಯಾಸವಿದೆ ಅನ್ನೋದು ತಿಳಿದುಬಂದಿದೆ. ಸದ್ಯ ಎಂಡೋಸ್ಕೋಪಿ ಮೂಲಕ ಬಾಲಕಿಯ ಹೊಟ್ಟೆಯಲ್ಲಿದ್ದ ಕೂದಲನ್ನು ಹೊರತೆಗೆಯಲಾಗಿದೆ. ಬಾಲಕಿಯ ಹೊಟ್ಟೆಯಲ್ಲಿ ಕೂದಲು ಗಡ್ಡೆಯಂತಾಗಿತ್ತು.

ಈ ಬಗ್ಗೆ ವೈದ್ಯ ಪೊಟ್ಲೂರಿ ವಂಶಿಕೃಷ್ಣ ಮಾತನಾಡಿ, 20 ವರ್ಷದ ಒಳಗಿನ ಕೆಲ ಬಾಲಕಿಯರು ರಕ್ತಹೀನತೆಯಿಂದ ಕೂದಲು ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಇಂತಹ ಕಾಯಿಲೆ 15 ಸಾವಿರ ಜನರಲ್ಲಿ ಒಬ್ಬರಿಗೆ ಕಂಡುಬರುತ್ತದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ : ಮಕ್ಕಳಂತೆ ಹಿಮದಲ್ಲಿ ಆಟವಾಡಿದ ರಾಹುಲ್ ಗಾಂಧಿ -​ ಸಹೋದರಿ ಪ್ರಿಯಾಂಕಾ

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.