ಉಡುಪಿಯಲ್ಲಿ ಮೀನು ಹರಾಜು ಕೂಗಿದ ಯಕ್ಷಗಾನ ವೇಷಧಾರಿ: ವಿಡಿಯೋ ವೈರಲ್ - Fish auction in udupi
🎬 Watch Now: Feature Video
ಉಡುಪಿ: ಕೃಷ್ಣನೂರು ಉಡುಪಿಯ ಜನ ಗಣೇಶ ಹಬ್ಬದ ಸಡಗರದಿಂದ ಹೊರ ಬಂದಿಲ್ಲ. ಹಬ್ಬದ ವೇಷಧಾರಿಗಳು ನಗರದ ನಾನಾ ಭಾಗದಲ್ಲಿ ಕಂಡು ಬರುತ್ತಿದ್ದಾರೆ. ಅದರಂತೆ ಮಲ್ಪೆ ಬಂದರಿಗೆ ಬಂದ ಯಕ್ಷಗಾನ ವೇಷಧಾರಿ ಮೀನು ಹರಾಜು ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಮಲ್ಪೆಯಲ್ಲೀಗ ಭಾರೀ ಪ್ರಮಾಣದ ಮೀನು ಬರುತ್ತಿದೆ. ಬೆಳಗ್ಗೆ ಹಾಗೂ ಸಂಜೆ ಹರಾಜು ಕೂಗಲಾಗುತ್ತೆ. ಮೀನು ಹರಾಜು ವೇಳೆ ಯಕ್ಷಗಾನ ವೇಷಧಾರಿಯೊಬ್ಬರು ಬಂದರಿಗೆ ಬಂದಿದ್ದು, ಈ ವೇಳೆ ಬಂಗುಡೆ ಮೀನುಗಳನ್ನು ತಾವೇ ಹರಾಜು ಕೂಗಿ ನೆರೆದಿದ್ದವರನ್ನು ರಂಜಿಸಿದ್ದಾರೆ. ಇವರು ಏಲಂ ಕೂಗುವ ವಿಡಿಯೋವನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸದ್ಯ ಕರಾವಳಿ ಸೇರಿದಂತೆ ಇತರೆಡೆ ವಿಡಿಯೋ ಭಾರೀ ವೈರಲ್ ಆಗಿದೆ.
Last Updated : Feb 3, 2023, 8:27 PM IST