ಮೈಸೂರಿನಲ್ಲಿ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಜನತೆ - ಚಿರತೆ ಸೆರೆ
🎬 Watch Now: Feature Video
ಮೈಸೂರು: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಬೋನಿಗೆ ಬಿದ್ದ ಘಟನೆ ಮೈಸೂರು ತಾಲೂಕಿನ ಮಾರಶೆಟ್ಟಿ ಗ್ರಾಮದಲ್ಲಿ ನಡೆದಿದೆ. ಚಾಮುಂಡಿ ಬೆಟ್ಟದಿಂದ ಅನತಿ ದೂರದಲ್ಲಿರುವ ಮಾರಶೆಟ್ಟಿ ಗ್ರಾಮದ ಹೊರವಲಯದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಚಿರತೆ ಜಾನುವಾರುಗಳನ್ನು ತಿಂದು ಪರಾರಿಯಾಗುತ್ತಿತ್ತು. ಇದರ ಕಾಟಕ್ಕೆ ಬೆದರಿದ ಗ್ರಾಮಸ್ಥರು, ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಇದೀಗ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಶುಕ್ರವಾರ ರಾತ್ರಿ ಬಿದ್ದಿದೆ. ಬೋನಿಗೆ ಬಿದ್ದ ಚಿರತೆಯನ್ನು ನಾಗರಹೊಳೆ ಅಭಯಾರಣ್ಯಕ್ಕೆ ರವಾನೆ ಮಾಡಲಾಗಿದೆ.
Last Updated : Feb 3, 2023, 8:36 PM IST