ಸಂಸತ್ ಎದುರಿಗೆ ಪ್ರತಿಭಟಿಸಿದ ಮೆಹಬೂಬಾ ಮುಫ್ತಿ ಪೊಲೀಸರ ವಶಕ್ಕೆ: ವಿಡಿಯೋ - Mehbooba mufti protest in Delhi
🎬 Watch Now: Feature Video
ನವದೆಹಲಿ: ಬಜೆಟ್ ಅಧಿವೇಶನ ರಂಗೇರಿದ್ದು, ಲೋಕಸಭೆ ಮತ್ತು ರಾಜ್ಯಸಭೆಯೊಳಗೆ ಗೌತಮ್ ಅದಾನಿ ವಿಷಯವಾಗಿ ಚರ್ಚೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದರೆ, ಇತ್ತ ಸಂಸತ್ ಹೊರಭಾಗದಲ್ಲಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಪ್ರತಿಭಟನೆ ನಡೆಸಿದರು. ಜಮ್ಮು ಕಾಶ್ಮೀರದಲ್ಲಿ ಗೂಂಡಾ ಸರ್ಕಾರವಿದೆ. ಸರ್ಕಾರ ಅತಿಕ್ರಮಿಸಿಕೊಂಡಿದೆ. ಅಫ್ಘಾನಿಸ್ತಾನದಂತೆ ಕಾಶ್ಮೀರವನ್ನು ನಾಶ ಮಾಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು. ಅನುಮತಿ ರಹಿತವಾಗಿ ವಿಜಯ್ ಚೌಕ್ ಬಳಿ ಧರಣಿ ನಡೆಸಲು ಮುಂದಾದ ಮೆಹಬೂಬಾ ಮುಫ್ತಿ ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಓದಿ: ಪ್ರಧಾನಿ ವಿರುದ್ಧ ಗಂಭೀರ ಆರೋಪ: ರಾಹುಲ್ ಗಾಂಧಿಗೆ ಬಿಜೆಪಿಯಿಂದ ಹಕ್ಕುಚ್ಯುತಿ ನೋಟಿಸ್
Last Updated : Feb 14, 2023, 11:34 AM IST