ಹುಬ್ಬಳ್ಳಿ ಬಳಿ ಭೀಕರ ಹತ್ಯೆ: ಆಸ್ತಿಗಾಗಿ ಮಾವನಿಗೆ 20ಕ್ಕೂ ಹೆಚ್ಚು ಬಾರಿ ಇರಿದು ಕೊಂದ ಅಳಿಯ - ಸಿಸಿಟಿವಿಯಲ್ಲಿ ಸೆರೆ
🎬 Watch Now: Feature Video
ಹುಬ್ಬಳ್ಳಿ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಂತ ಮಾವನನ್ನೇ ಅಳಿಯನೋರ್ವ 20 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಸುಳ್ಳ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಳ್ಳದ ಗ್ರಾಮದ ಶಿವಪ್ಪ ಕೊಲೆಯಾದ ವ್ಯಕ್ತಿ. ಶಿವಪ್ಪ ಜೊತೆ ಅವರ ಅಳಿಯ ಆಸ್ತಿಯ ವಿಚಾರಕ್ಕೆ ಜಗಳ ತೆಗೆದು ಗ್ರಾಮದ ಹಾಲಿನ ಕೇಂದ್ರದ ಮುಂದೆಯೇ ಕೊಲೆ ಮಾಡಿದ್ದಾನೆ
ಮಾವನ ಕೊಂದ ಅಳಿಯ: ಘಟನೆ ವೇಳೆ ಗ್ರಾಮಸ್ಥರು ಬಂದು ತಡೆಯುವಷ್ಟರಲ್ಲಿ ಅಳಿಯ 20ಕ್ಕೂ ಹೆಚ್ಚು ಬಾರಿ ಮಾವನಿಗೆ ಚುಚ್ಚಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಶಿವಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಳಿಯ ಗುರಪ್ಪ ಪರಾರಿಯಾಗಿದ್ದು, ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.
(ಇದನ್ನೂ ಓದಿ: ಹುಬ್ಬಳ್ಳಿ: ಆಸ್ತಿ ವಿಚಾರಕ್ಕೆ ದೇವಸ್ಥಾನದ ಮುಂದೆಯೇ ಮಾವನ ಕೊಂದ ಅಳಿಯಂದಿರು)