ರಾಜಧಾನಿಯಲ್ಲಿ ಬೆಕ್ಕುಗಳ ಸಾವು: ಮೂಢನಂಬಿಕೆಗೆ ಬಲಿಯಾದವೇ ಮಾರ್ಜಾಲಗಳು? - delhi cats Death
🎬 Watch Now: Feature Video
ನವದೆಹಲಿ: ಮನುಷ್ಯನ ಮೂಢನಂಬಿಕೆ ಮೂಕ ಪ್ರಾಣಿ ಬಲಿಯಾಗಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಮಾನವ ಎಷ್ಟು ಕ್ರೂರಿ ಎಂದರೆ ತನಗೆ ತೊಂದರೆ ಆಗುತ್ತಿದೆ ಎನಿಸಿದರೆ ಕೊಂದಾದರೂ ಅದನ್ನು ಮೀರಲು ಪ್ರಯತ್ನಿಸುತ್ತಾನೆ. ದೆಹಲಿಯ ಅಪಾರ್ಟ್‌ಮೆಂಟ್ ಒಂದರಲ್ಲಿ 10 ರಿಂದ 12 ಬೆಕ್ಕಿನ ಮರಿಗಳು ವಾಸವಾಗಿದ್ದವು. ಎರಡು ದಿನದಿಂದ ಎಲ್ಲಾ ಮಾರ್ಜಾಲಗಳು ಸತ್ತು ಹೋಗಿವೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನಲ್ಲಿ ಕಪ್ಪು ಬೆಕ್ಕುಗಳು ಅಪಶಕುನ ಎಂಬ ಮೂಢನಂಬಿಕೆಯಿಂದ ಆಹಾರದಲ್ಲಿ ವಿಷ ಹಾಕಿ ಕೊಂದಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಎರಡು ದಿನದಲ್ಲಿ ಬೆಕ್ಕುಗಳು ಅಲ್ಲಲ್ಲಿ ಸತ್ತು ಬಿದ್ದಿರುವುದನ್ನು ಕಂಡ ಕೆಲ ಪ್ರಾಣಿ ಪ್ರೇಮಿಗಳು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಾವಿನ ಕಾರಣ ತಿಳಿಯಲು ಅಪಾರ್ಟ್ಮೆಂಟ್ಗೆ ಅಳವಡಿಸಿರುವ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ದೆಹಲಿಯ ಮುಖ್ಯಭಾಗದಲ್ಲಿರುವ ಸಹ್ಯೊಗ್ ಅಪಾರ್ಟ್‌ಮೆಂಟ್ ದೆಹಲಿ ವಿಶ್ವವಿದ್ಯಾಲಯದ ಶಿಕ್ಷಕರ ಸಹಕಾರಿ ವಸತಿ ಸಂಘವಾಗಿದೆ. ಇದರಲ್ಲಿ ದೆಹಲಿ ವಿಶ್ವವಿದ್ಯಾಲಯದ ಹೆಚ್ಚಿನ ಶಿಕ್ಷಕರು ವಾಸಿಸುತ್ತಿದ್ದಾರೆ.
ಇದನ್ನೂ ಓದಿ: ಚಿಕ್ಕೋಡಿ: ಡಿವೈಎಸ್ಪಿ ಕಚೇರಿಯಲ್ಲಿ ಹಾವು ಪ್ರತ್ಯಕ್ಷ..