ಧಾರವಾಡ: ಶಾಸಕ ಅರವಿಂದ್ ಬೆಲ್ಲದ ಭಾವಚಿತ್ರಕ್ಕೆ ಹಾಲೆರೆದು ರಸ್ತೆ ಸುಧಾರಣೆಗೆ ಆಗ್ರಹ - ಬೆಲ್ಲದ ಭಾವಚಿತ್ರಕ್ಕೆ ಹಾಲೆರೆದು ರಸ್ತೆ ಸುಧಾರಣೆಗೆ ಆಗ್ರಹ
🎬 Watch Now: Feature Video
ಧಾರವಾಡ: ನಗರದಲ್ಲಿ ಹದಗೆಟ್ಟ ರಸ್ತೆಗಳನ್ನು ಮುಂದಿನ ಒಂದು ತಿಂಗಳೊಳಗಾಗಿ ಗುಂಡಿಮುಕ್ತ ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಹಾಗೂ ಕಾಂಗ್ರೆಸ್ ಮುಖಂಡ ಪಿ ಎಚ್ ನೀರಲಕೇರಿ ಆಗ್ರಹಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಅರವಿಂದ ಬೆಲ್ಲದ ಅವರಿಗೆ ದೇವರು ಒಳ್ಳೆಯ ಬುದ್ಧಿ ನೀಡಲಿ ಎಂದು ಬೆಲ್ಲದ ಭಾವಚಿತ್ರಕ್ಕೆ ಹಾಲೆರೆದು ನೀರಲಕೇರಿ ಅಸಮಾಧಾನ ವ್ಯಕ್ತಪಡಿಸಿದರು. ರಸ್ತೆಗಳು ಬಹಳ ಹದಗೆಟ್ಟಿದ್ದು, ಧಾರವಾಡದ ರಸ್ತೆ ಗುಂಡಿಗಳನ್ನು ಮುಚ್ಚಿ, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕಾಗಿ ಅವಕಾಶ ಮಾಡಿಕೊಡಬೇಕು. ಧಾರವಾಡದ ರಸ್ತೆಗಳ ಪರಿಸ್ಥಿತಿ ತೀರಾ ಶೋಚನಿಯವಾಗಿದೆ. ಬಿಆರ್‌ಟಿಎಸ್ ರಸ್ತೆಯೂ ಕೂಡ ಹದಗೆಟ್ಟಿದ್ದು, ಸಾರ್ವಜನಿಕರು ಪ್ರತಿನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ನವಲೂರು ಬಳಿ ಬಿಆರ್‌ಟಿಎಸ್ ರಸ್ತೆ ಪರಿಸ್ಥಿತಿ ಶಾಸಕರಿಗೆ ಗೊತ್ತಿಲ್ಲವೇ ಅಥವಾ ಕಣ್ಮುಚ್ಚಿ ಕುಳಿತುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.
Last Updated : Feb 3, 2023, 8:32 PM IST