ಅಪ್ಪು ಅವರದ್ದು ನಗುವಿನ ಮುಖ.. ಪುನೀತ್​ ಇಲ್ಲ ಅನ್ನೋದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ: ಬಾಲಿವುಡ್​ ನಟ ಅಮಿತಾಬ್​ ಬಚ್ಚನ್​ - ಅಭಿಮಾನಿಗಳಿಗೆ ಅಷ್ಟು ಹತ್ತಿರ

🎬 Watch Now: Feature Video

thumbnail

By

Published : Oct 22, 2022, 7:22 AM IST

Updated : Feb 3, 2023, 8:29 PM IST

ಪುನೀತ ಪರ್ವ ಕಾರ್ಯಕ್ರಮದಲ್ಲಿ ಬಾಲಿವುಡ್​ ನಟ ಅಮಿತಾಬ್ ಬಚ್ಚನ್ ವಿಡಿಯೋ ಸಂದೇಶದ ಮೂಲಕ ಮಾತನಾಡಿದ್ದಾರೆ. ನಾವೆಲ್ಲಾ ಪ್ರೀತಿಯಿಂದ ಪುನೀತ್​ಗೆ ಅಪ್ಪು ಎಂದು ಕರೆಯುತ್ತೇವೆ. ಅಪ್ಪು ಬಗ್ಗೆ ಈ ವೇಳೆ ಮಾತನಾಡುವುದು ಕಷ್ಟಕರವೆನಿಸುತ್ತದೆ. ಆದರೆ ನಾವು ಅವರನ್ನು ತುಂಬಾ ಚಿಕ್ಕ ವಯಸ್ಸಿನಲ್ಲಿ ಕಳೆದುಕೊಂಡೆವು. ನನಗೆ ಅವರ ಸಾವಿನ ಸುದ್ದಿಯನ್ನು ತಿಳಿದ ತಕ್ಷಣ ಮಾತನಾಡಲು ಪದಗಳೇ ಸಿಗಲಿಲ್ಲ. ಅದೊಂದು ನಿಜಕ್ಕೂ ದುಃಖಕರ ಸಂಗತಿಯಾಗಿದೆ. ಇಂದಿಗೂ ಕೂಡ ಅಪ್ಪು ನಮ್ಮಿಂದ ದೂರವಾಗಿದ್ದಾರೆ ಎಂದು ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ಡಾ ರಾಜಕುಮಾರ್ ಅವರು ನಮ್ಮ ಕುಟುಂಬಕ್ಕೆ ಹತ್ತಿರದ ಸ್ನೇಹಿತರಾಗಿದ್ದರು. 1982 ರಲ್ಲಿ ನಾನು ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ ಅವರು ನನಗೋಸ್ಕರ ಪ್ರಾರ್ಥನೆ ಮಾಡಿದ್ದರು. ಅಂತಹ ಸಂಗತಿಗಳನ್ನು ನಾನು ಎಂದಿಗೂ ಮರೆಯುವುದಿಲ್ಲ. ಅಪ್ಪುವಿನಲ್ಲಿ ಅತಿಯಾಗಿ ಆಕರ್ಷಣೆಯಾದ ಸಂಗತಿ ಏನೆಂದರೆ ಅವರು ಯಾವಾಗಲೂ ನಗುತ್ತಿದ್ದರು. ಅಪ್ಪು ಅಂದರೆ ಅವರ ನಗುವಿನ ಮುಖ. ಯಾವುದೇ ಸಂದರ್ಭ ಆಗಿರಲಿ, ಯಾವುದೇ ಪರಿಸ್ಥಿತಿ ಇರಲಿ ಪುನೀತ್ ರಾಜ್‌ಕುಮಾರ್ ಮುಖದಲ್ಲಿ ನಗು ಯಾವತ್ತೂ ಮಾಸುತ್ತಿರಲಿಲ್ಲ. ಇದೀಗ ಅಪ್ಪು ಇಲ್ಲ ಅನ್ನೋದನ್ನು ಅರಗಿಸಿಕೊಳ್ಳಲು, ಮಾತನಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಅವರು ನಮಗೆ ಮತ್ತು ಅವರ ಅಭಿಮಾನಿಗಳಿಗೆ ಅಷ್ಟು ಹತ್ತಿರದವರಾಗಿದ್ದರು ಎಂದು ಬಾಲಿವುಡ್​ ಸ್ಟಾರ್​ ಅಮಿತಾಬ್ ಬಚ್ಚನ್ ಹೇಳಿದರು. ಬಳಿಕ ಗಂಧದ ಗುಡಿ ಚಿತ್ರಕ್ಕೆ ಶುಭಹಾರೈಸಿದರು.
Last Updated : Feb 3, 2023, 8:29 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.