ಎರಡು ದಿನಗಳ ಕಾಲ ಒಡಿಶಾ ಪ್ರವಾಸ ಕೈಗೊಂಡಿರುವ ಅಮಿತ್ ಶಾ - ಅಮಿತ್ ಶಾ
🎬 Watch Now: Feature Video
ಭುವನೇಶ್ವರ (ಒಡಿಶಾ): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭುವನೇಶ್ವರ್ಗೆ ಆಗಮಿಸಿದ್ದು, ಎರಡು ದಿನಗಳ ಕಾಲ ಒಡಿಶಾ ಪ್ರವಾಸ ಕೈಗೊಂಡಿದ್ದಾರೆ. ನಿನ್ನೆ ತಡರಾತ್ರಿ ನಗರದ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮಿತ್ ಶಾ ಅವರನ್ನು ಸ್ವಾಗತಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಬಳಿಕ ಅಮಿತ್ ಶಾ ಅವರು ಬಿಗಿ ಭದ್ರತೆಯೊಂದಿಗೆ ಹೋಟೆಲ್ ಮೇಫೇರ್‌ಗೆ ತೆರಳಿದ್ದಾರೆ. ಇಂದು ಕಟಕ್ ಮತ್ತು ಭುವನೇಶ್ವರನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಅಮಿತ್ ಶಾ, ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ, ಮೋದಿ @ 20 ಶೀರ್ಷಿಕೆಯ ಪುಸ್ತಕ ಬಿಡುಗಡೆ, ಲಿಂಗರಾಜ ದೇಗುಲಕ್ಕೆ ಭೇಟಿ , ಕಟಕ್ ನಲ್ಲಿ ರೋಡ್ ಶೋ ನಡೆಸಲಿದ್ದಾರೆ.
Last Updated : Feb 3, 2023, 8:26 PM IST