thumbnail

By

Published : Feb 20, 2022, 12:31 PM IST

Updated : Feb 3, 2023, 8:17 PM IST

ETV Bharat / Videos

ಚಂಬಲ್ ನದಿಗೆ ಉರುಳಿದ ಮದುವೆಗೆ ತೆರಳುತ್ತಿದ್ದ ಕಾರು: ಮದುಮಗ ಸೇರಿ 9 ಮಂದಿ ಸಾವು

ನಿಯಂತ್ರಣ ತಪ್ಪಿದ ಕಾರೊಂದು ಚಂಬಲ್ ನದಿಗೆ ಉರುಳಿಬಿದ್ದು ಮದುಮಗ ಸೇರಿ 9 ಮಂದಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಕೋಟಾ ನಗರದಲ್ಲಿ ನಡೆದಿದೆ. ನದಿಯಿಂದ ಎಲ್ಲರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಕಾರು ನಿಯಂತ್ರಣ ತಪ್ಪಲು ಮತ್ತು ನೀರಿಗೆ ಬೀಳಲು ಕಾರಣವೇನು ಎಂದು ತಿಳಿದುಬಂದಿಲ್ಲ. ಕಾರು ಉಜ್ಜೈನಿ ಕಡೆಗೆ ತೆರಳುತ್ತಿತ್ತು ಎಂದು ಗೊತ್ತಾಗಿದೆ. ಮುಂಜಾನೆ 5 ಗಂಟೆಗೆ ಹೋಟೆಲ್ಲೊಂದರ​ ಬಳಿ ಚಹಾ ಕುಡಿದು ತಮ್ಮ ಕುಟುಂಬಸ್ಥರೊಡನೆ ಮಾತನಾಡಿದ್ದವರು ಆ ಬಳಿಕ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
Last Updated : Feb 3, 2023, 8:17 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.