ವೈದ್ಯಕೀಯ ಕ್ಷೇತ್ರದಲ್ಲಿ ರೇಡಿಯೋಲಾಜಿ ಎಂಬುದು ಅತ್ಯಂತ ಪ್ರಮುಖ ಭಾಗವಾಗಿದೆ. 20ನೇ ಶತಮಾನದ ಬಳಿಕ ಈ ರೇಡಿಯೋಲಾಜಿ ತಂತ್ರಜ್ಞಾನವೂ ಅಭಿವೃದ್ಧಿಕಂಡಿತು. ಕೃತಕ ಬುದ್ದಿಮತ್ತೆ ಇದಕ್ಕೆ ಮತ್ತಷ್ಟು ಬೆಂಬಲ ನೀಡಿದೆ.
ಜರ್ಮನ್ ಭೌತಶಾಸ್ತ್ರಜ್ಞ ವಿಲ್ಹೆಲ್ಮ್ ಕಾನ್ರಾಡ್ ರೋಂಟ್ಜೆನ್ ಈ ಎಕ್ಸ್ ರೇ ಕಂಡು ಹಿಡಿದರು. 1895ರಂದು ನವೆಂಬರ್ 8ರಂದು ಅವರು ಕಂಡು ಹಿಡಿದ ಸಾಧನವೂ ವೈದ್ಯಕೀಯ ಕ್ಷೇತ್ರದ ಚಿಕಿತ್ಸೆಯಲ್ಲಿ ದೊಡ್ಡ ಮೈಲಿಗಲ್ಲಾಯಿತು. ವಿಜ್ಞಾನ ಕ್ಷೇತ್ರದಲ್ಲಿ ಅವರು ಮಾಡಿದ ಹೊಸ ಅನ್ವೇಷಣೆ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಹಿನ್ನಲೆ ನವೆಂಬರ್ 8ರಂದು ವಿಶ್ವ ರೇಡಿಯೋಗ್ರಫಿ ದಿನವನ್ನು ಆಚರಿಸಲಾಗುವುದು. ರೋಂಟ್ಜೆನ್ ಅವರು ನೀಡಿದ ಈ ಮಹತ್ತರ ಕೊಡುಗೆಗಾಗಿ 1901ರಲ್ಲಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಕ್ಸ್ ರೇ ಹುಟ್ಟಿದ ಕಥೆ: ವೈದ್ಯಕೀಯ ಇತಿಹಾಸದಲ್ಲಿ ರೆಡಿಯೋಲಾಜಿಗೆ 100 ವರ್ಷದ ಇತಿಹಾಸವಿದೆ. ಈ ಕುರಿತು ಅಧ್ಯಯನ ಆರಂಭಿಸಿದ ರೋಂಟ್ಜೆನ್, ಈ ಕಿರಣಗಳು ನಮ್ಮ ದೇಹದ ಅಂಗಾಂಶವನ್ನು ಹಾದು ಹೋಗುವ ಜೊತೆಗೆ ಬಾಹ್ಯ ವಸ್ತುಗಳು (Foreign particles) ಪತ್ತೆ ಮಾಡಲು ಸಾಧ್ಯ ಎಂದು ಅರಿತರು. ಈ ವೇಳೆ, ಅವರು ತಮ್ಮ ಹೆಂಡತಿಯ ಕೈ ಚಿತ್ರವನ್ನು ಫೋಟೋಗ್ರಾಫಿಕ್ ಫ್ಲೇಟ್ನಲ್ಲಿ ಪಡೆದರು. ಆಗ ಆ ಪ್ಲೇಟ್ನಲ್ಲಿ ಅವರ ಕೈ ಮೂಳೆಗಳು, ಅವರು ತೊಟ್ಟ ಉಂಗುರ ಕಂಡು ಬಂದಿತ್ತು. ಇದು ಜಗತ್ತಿನ ಮೊದಲ ಮಾನವ ಎಕ್ಸ್ರೇ ಆಗಿತ್ತು.
ವಿಶ್ವ ರೇಡಿಯೋಗ್ರಫಿ ದಿನದ ಹಿನ್ನಲೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮುಂದಿನ ಪೀಳಿಗೆಯ ಜನರಿಗೆ ರೆಡಿಯೋಗ್ರಫಿ ವೃತ್ತಿಯನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಈ ದಿನದಂದು ಆಧುನಿಕ ಆರೋಗ್ಯ ಸೌಲಭ್ಯಗಳಲ್ಲಿ ಕ್ಷ - ಕಿರಣಗಳ ಕೊಡುಗೆಯ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ. ವಿಶ್ವ ರೇಡಿಯೋಗ್ರಫಿ ದಿನವೂ ರೋಗಿಗಳ ಸುರಕ್ಷತೆಯನ್ನು ಹೊಂದಿದೆ. ರೆಡಿಯೋಗ್ರಫಿಯು ರೋಗಿಗಳಲ್ಲಿ ಹಲವು ರೋಗಳನ್ನು ಪತ್ತೆ ಮಾಡಲು ಸಹಾಯ ಮಾಡುತ್ತದೆ. ಇದರ ಹೊರತಾಗಿ ಅನೇಕ ಚಿಕಿತ್ಸೆಯಲ್ಲಿ ಈ ರೇಡಿಯೋಗ್ರಫಿ ಬಳಕೆ ಮಾಡಲಾಗುತ್ತಿದೆ.
ಸಿಟಿ ಸ್ಯಾನ್ಸ್, ಎಂಆರ್ಐ, ಎಂಆರ್ಎ, ನ್ಯೂಕ್ಲಿಯರ್ ಮೆಡಿಸಿನ್, ಪಿಇಟಿ, ಅಲ್ಟ್ರಾಸೌಂಡ್, ಸ್ತನ ಪರೀಕ್ಷೆಗಾಗಿ ಮ್ಯಾಮೊಗ್ರಾಫಿ ಸೇರಿದಂತೆ ಹಲವು ರೋಗ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಈ ರೆಡೆಯೋಲಾಜಿ ಬಳಕೆ ಮಾಡಲಾಗುತ್ತಿದೆ.
ವಿಶ್ವ ರೇಡಿಯೋಗ್ರಫಿ ದಿನದ ಆರಂಭವನ್ನು 2012ರಿಂದ ಆರಂಭಿಸಲಾಯಿತು. ರೆಡಿಯೋಲಾಜಿ ಸೊಸೈಟಿ ಆಫ್ ನಾರ್ತ್ ಅಮೆರಿಕನ್, ಅಮೆರಿಕನ್ ಕಾಲೇಜ್ ಆಫ್ ರೆಡಿಯೋಲಾಜಿ ಮತ್ತು ಯುರೋಪಿಯನ್ ಸೊಸೈಟಿ ಆಫ್ ರೆಡಿಯೋಲಾಜಿ ಜಂಟಿಯಾಗಿ ಈ ವಿಶ್ವ ರೆಡಿಯೋಗ್ರಫಿ ದಿನವನ್ನು ಆಚರಿಸಲು ನಿರ್ಧರಿಸಿದರು. ಕೆಲವು ವರದಿ ಪ್ರಕಾರ 1996ರಿಂದ ಈ ದಿನ ಆಚರಣೆಗೆ ಬಂದಿತು.
(ಮಾಹಿತಿ: ಡಾ ತುಮು ಮಹೇಶ್ ಕುಮಾರ್, ಸಿನೀಯರ್ ಕನ್ಸಲ್ಟೆಂಟ್ ಇಂಟರ್ವೆಷನಲ್ ರೆಡಿಯೋಲಾಜಿಸ್ಟ್, ಮಲ್ಲರೆಡ್ಡಿ ನಾರಾಯಣ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್)
ಇದನ್ನೂ ಓದಿ: 2022ರಲ್ಲಿ ಜಾಗತಿಕವಾಗಿ 7.5 ಮಿಲಿಯನ್ ಜನರಲ್ಲಿ ಕ್ಷಯ ರೋಗ ಪತ್ತೆ: WHO