ಬೆಂಗಳೂರು: ಪ್ರತಿ ವರ್ಷ ಏಪ್ರಿಲ್ 17ರಂದು ವಿಶ್ವ ಹಿಮೋಫಿಲಿಯಾ ದಿನವನ್ನು ಆಚರಿಸಲಾಗುತ್ತದೆ. ರಕ್ತ ಸಂಬಂಧಿ ಸಮಸ್ಯೆಯಾದ ಹಿಮೋಫಿಲಿಯಾ ಕುರಿತು ಅರಿವು ಮೂಡಿಸುವ ಸಂಬಂಧ ಈ ದಿನವನ್ನು ಆಚರಿಸಲಾಗುವುದು. ವರ್ಲ್ಡ್ ಫೆಡರೇಶನ್ ಆಫ್ ಹಿಮೋಫಿಲಿಯಾ ಸಂಸ್ಥಾಪಕ ಫ್ರಾಂಕ್ ಷ್ನಾಬೆಲ್ ಅವರ ಹುಟ್ಟುಹಬ್ಬದ ಅಂಗವಾಗಿ ಈ ದಿನವನ್ನು ಆಚರಿಸಲಾಗುವುದು. ಅದು ವಿಶ್ವದ ಅತೀ ಅಪರೂಪದ ರೋಗ ಆಗಿದ್ದು, ಈ ರೋಗಕ್ಕೆ ಬಹುತೇಕ ಅನುವಂಶಿಕ ಹಿನ್ನೆಲೆ ಇರುವುದರಿಂದ ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ. ಈ ಬಗ್ಗೆ ಹೆಚ್ಚಿನ ಜಾಗೃತಿ ಅವಶ್ಯಕವಾಗಿದೆ.
ಏನಿದು ಹಿಮೋಫಿಲಿಯಾ: ರಕ್ತ ಸಂಬಂಧಿ ಸಮಸ್ಯೆಯಾಗಿರುವ ಈ ಹಿಮೋಫಿಯಾ ಅನುವಂಶಿಕ ರಕ್ತದ ಕಾಯಿಲೆಯಾಗಿದೆ. ಈ ಸಮಸ್ಯೆ ಹೊಂದಿರುವ ರೋಗಿಯ ದೇಹದಲ್ಲಿ ರಕ್ತ ಪರಿಚಲನೆಯಲ್ಲಿ ತೊಡಗು ಕಾಣಬಹುದು. ದೇಹದಲ್ಲಿನ ಸಾಮಾನ್ಯ ರಕ್ತ ಹೆಪ್ಪುಗಟ್ಟುವಿಕೆ ಪ್ರೋಟಿನ್ಗಳ ಕೊರತೆಯುಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ರಕ್ತ ಹೆಪ್ಪುಗಟ್ಟುವಿಕೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಜೊತೆಗೆ ಮೊಣಕೈ, ಮೊಣಕಾಲಿ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿನ ರಕ್ತ ಸ್ರಾವ ಸಂಭವಿಸುತ್ತದೆ. ಜೊತೆಗೆ ರಕ್ತ ಕಣಗಳ ಮೇಲೆ ಇದು ಆಳವಾದ ಪರಿಣಾಮ ಹೊಂದಿರುತ್ತದೆ. ಈ ಸಮಸ್ಯೆಯನ್ನು ಬ್ರಿಟಿಷ್ ರಾಯಲ್ ಡಿಸೀಸ್ ಎಂದು ಕೂಡ ಕರೆಯಲಾಗುವುದು.
ರಕ್ತದಲ್ಲಿನ ಫ್ಯಾಕ್ಟರ್-8ರ ಕೊರತೆಯಿಂದ ಹಿಮೋಫಿಲಿಯಾ ಉಂಟಾಗುತ್ತದೆ. ಇದರಲ್ಲಿ ಎರಡು ವಿಧ ಇದ್ದು. ಹಿಮೋಫಿಲಿಯಾ ಎ ಮತ್ತು ಬಿ ಎಂದು ಗುರುತಿಸಲಾಗಿದೆ. ಹಿಮೋಫಿಲಿಯಾ ಎನಲ್ಲಿ, ಫ್ಯಾಕ್ಟರ್-8 ಮಟ್ಟಗಳು ಕಡಿಮೆ ಇರುತ್ತದೆ. ಇಲ್ಲ. ದೇಹದಲ್ಲಿ ಫ್ಯಾಕ್ಟರ್ 9 ಕೊರತೆಯಿಂದ ಹಿಮೋಫಿಲಿಯಾ ಬಿ ಸಂಭವಿಸುತ್ತದೆ. ಬಹುತೇಕರಲ್ಲಿ ಕಾಡುವುದು ಹಿಮೋಫಿಲಿಯಾ ಎ ಸಮಸ್ಯೆ. ಇದರಲ್ಲಿ ದೇಹದಲ್ಲಿನ ಕ್ರೋಮೋಸೋಮ್ ವ್ಯವಸ್ಥೆ ಕ್ಷೀಣಿಸುತ್ತದೆ. ಈ ರೋಗ ಹೊಂದಿರುವವರಿಗೆ ಗಾಯವಾದಾಗ ಅದರ ರಕ್ತಸ್ರಾವ ನಿಲ್ಲುವುದಿಲ್ಲ. ಅಲ್ಲದೇ ಇವರಲ್ಲಿ ರಕ್ತದ ಪ್ಲೇಟ್ಲೆಟ್ ಸಂಖ್ಯೆ, ಪ್ರೋಥ್ರೋಂಬಿನ್, ಪ್ಲೇಟ್ಲೆಟ್ ಕಾಯಿಲೆ ಕಾಣಬಹುದು.
ಈ ರಕ್ತ ಸಂಬಂಧಿ ಸಮಸ್ಯೆ ರೋಗುವನ್ನು ತಡೆಗಟ್ಟಲು ವೈದ್ಯಕೀಯ ಚಿಕಿತ್ಸೆ ಇದೆ. ಆರೋಗ್ಯ ತಜ್ಞರ ಪ್ರಕಾರ, ವಿಟಮಿನ್ ಬಿ 6 ಮತ್ತು ಬಿ 12 ಕೆಂಪು ರಕ್ತ ಕಣಗಳ ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ. ವಿಟಮಿನ್ ಸಿ ಯಿಂದಾಗಿ ರಕ್ತ ಹೆಪ್ಪುಗಟ್ಟುವಿಕೆ ಪ್ರಕ್ರಿಯೆಯು ಸುಧಾರಿಸುತ್ತದೆ. ರಕ್ತ ಹೆಪ್ಪುಗಟ್ಟುವಿಕೆಗೆ ಕಾಲಜನ್ ಪ್ರಕ್ರಿಯೆಯನ್ನು ಸಹ ಬಳಸಲಾಗುತ್ತದೆ. ಹಿಮೋಫಿಲಿಕ್ ರೋಗಿಗಳಲ್ಲಿ, ಕಾಲಜನ್ ಪ್ರಕ್ರಿಯೆಯಿಂದಾಗಿ ಪರಿಸ್ಥಿತಿಯು ಕಡಿಮೆ ತೀವ್ರವಾಗಿರಬಹುದು.
ಭಾರತದಲ್ಲಿ ಹಿಮೋಫಿಲಿಯಾ: ಈ ರೋಗದ ಚಿಕಿತ್ಸೆಗೆ ಕೆಲವು ಸುಧಾರಿತ ಚಿಕಿತ್ಸೆಗಳಿದ್ದರೂ, ಸರಿಯಾದ ರೋಗನಿರ್ಣಯದ ಸೌಲಭ್ಯಗಳಿಲ್ಲದ ಕಾರಣದಿಂದ ಸುಮಾರು 80 ಪ್ರತಿಶತದಷ್ಟು ಭಾರತೀಯರು ಈ ಸಮಸ್ಯೆ ಗುರುತಿಸುವಲ್ಲಿ ವಿಫಲರಾಗುತ್ತಾರೆ. ಈ ಸಮಸ್ಯೆ ಹೊಂದಿರುವ ರೋಗಿಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಅಂದಾಜಿಸಲಾಗಿದೆ. ಕೇವಲ 20,000 ರೋಗಿಗಳು ಮಾತ್ರ ಹಿಮೋಫಿಲಿಯಾ ಫೆಡರೇಶನ್ ಆಫ್ ಇಂಡಿಯಾದಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ. ಆದರೆ 1.5 ಲಕ್ಷಕ್ಕೂ ಹೆಚ್ಚು ರೋಗಿಗಳನ್ನು ಇನ್ನೂ ರೋಗನಿರ್ಣಯ ನಡೆಸಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ ವಿಶ್ವ ಹಿಮೋಫಿಲಿಯಾ ದಿನವು ಕ್ರಮ ತೆಗೆದುಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಜಗತ್ತಿಗೆ ತೋರಿಸುವ ಅವಶ್ಯಕತೆ ಇದೆ.
ಇದನ್ನೂ ಓದಿ: ರಕ್ತದ ಸಕ್ಕರೆ ಅಣುಗಳ ಮೂಲಕ ಅಲ್ಝೈಮರ್ ಸಮಸ್ಯೆ ಪತ್ತೆ ಮಾಡಬಹುದು; ಅಧ್ಯಯನದಲ್ಲಿ ಬಹಿರಂಗ