ETV Bharat / sukhibhava

ವೃತ್ತಿನಿರತ ಮಹಿಳೆ ಎದುರಿಸುವ ಮಾನಸಿಕ ಆರೋಗ್ಯ ಸವಾಲುಗಳಿವು.. - ಸಮಾಜ ಮಹಿಳೆಯರ ಬಗ್ಗೆ ಕೆಲವೊಂದು ಅವಾಸ್ತವಿಕ ನಿರೀಕ್ಷೆ

ಮಹಿಳೆ ಏಕಕಾಲಕ್ಕೆ ಹಲವು ಪಾತ್ರ ನಿರ್ವಹಣೆ ಜವಾಬ್ದಾರಿ ಹೊಂದಿದ್ದು ಮಾನಸಿಕವಾಗಿ ಕುಗ್ಗುತ್ತಾಳೆ. ಆಕೆಗೆ ಉದ್ಯೋಗ ಸ್ಥಳದಲ್ಲೂ ಬೆಂಬಲದ ಅವಶ್ಯಕತೆ ಇದೆ.

working women challenges to get good mental health

author img

By

Published : May 19, 2023, 11:07 AM IST

ಎಲ್ಲವನ್ನೂ ಮಾಡಲು, ಎಲ್ಲವನ್ನೂ ಹೊಂದಿ ಪರ್ಫೆಕ್ಟ್​ ಆಗಿರಲು ಇರುವ ಸವಾಲೆಂದರೆ ಅದು ನಿರಂತರ ಒತ್ತಡ. ಸಮಾಜವು ಮಹಿಳೆಯರ ಬಗ್ಗೆ ಕೆಲವೊಂದು ಅವಾಸ್ತವಿಕ ನಿರೀಕ್ಷೆಗಳನ್ನು ಹೊಂದಿರುತ್ತದೆ. ಆಕೆ ಒಂದೇ ಸಮಯದಲ್ಲಿ ತಾಯಿ, ಮಗಳು, ಸ್ನೇಹಿತೆ ಮತ್ತು ವೃತ್ತಿಪರ ಮಹಿಳೆಯಾಗಬೇಕು ಎಂದು ಬಯಸುತ್ತದೆ.

ಈ ಒತ್ತಡ ಆತಂಕ, ಖಿನ್ನತೆಯಂತಹ ಮಾನಸಿಕ ತೊಂದರೆಗೆ ಕಾರಣವಾಗುತ್ತದೆ. ಬೇರೆಯವರ ಅವಶ್ಯಕತೆಗೆ ಅನುಗುಣವಾಗಿ ನಾವು ನಮ್ಮ ಸಮಯ ಮತ್ತು ಸಂಪನ್ಮೂಲವನ್ನು ಅಲಕ್ಷ್ಯಿಸುತ್ತೇವೆ. ನಮ್ಮದೇ ಕೆಲಸವನ್ನು ನಾವು ನಿಭಾಯಿಸುತ್ತೇವೆ ಎಂದಾಗ ಬೆಂಬಲ ಮತ್ತು ಸಹಾಯ ಪಡೆಯುವುದು ಕಷ್ಟವಾಗುತ್ತದೆ.

ಮತ್ತೊಂದು ಸವಾಲೆದರೆ, ಉದ್ಯೋಗ ಸ್ಥಳದಲ್ಲಿನ ಬೆಂಬಲ ಮತ್ತು ಅರ್ಥೈಸಿಕೊಳ್ಳುವಿಕೆ. ಅನೇಕ ಮಹಿಳೆಯರು ಉದ್ಯೋಗ ಸ್ಥಳದಲ್ಲಿ ಲಿಂಗಾಧಾರಿತ, ವರ್ಣ ಮತ್ತು ಕೌಟುಂಬಿಕ ಸ್ಥಿತಿಗತಿ ಹಿನ್ನೆಲೆಯ ತಾರತಮ್ಯಕ್ಕೆ ಒಳಗಾಗುತ್ತಾರೆ. ಇದು ಅವರ ವೃತ್ತಿ ಜೀವನದಲ್ಲಿ ಮುನ್ನಡೆಯಲು ಸವಾಲಾಗಬಹುದು. ಜೊತೆಗೆ ಇದು ಪ್ರತ್ಯೇಕತೆ ಮತ್ತು ಅಸಮರ್ಪಕತೆಯ ಭಾವನೆ ಮೂಡಿಸಿ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಮಾನಸಿಕ ಆರೋಗ್ಯಕ್ಕೆ ನೀಡಬೇಕು ಆದ್ಯತೆ: ಒಂಟಿ ತಾಯಿ ಮತ್ತು ಕೆಲವು ತಾಯಂದಿರ ಮಾನಸಿಕ ಆರೋಗ್ಯದ ಮೇಲೆ ಈ ಸವಾಲುಗಳು ನೇರ ಪ್ರಭಾವ ಬೀರುತ್ತವೆ. ಇದರಿಂದ ಅವರು ವಿಪರೀತ ಒಂಟಿತನ, ಆತಂಕ ಎದುರಿಸುತ್ತಾರೆ. ಒತ್ತಡ ಅನುಭವಿಸಿದಾಗ ಅದನ್ನು ಹೇಗೆ ನಿವರ್ಹಣೆ ಮಾಡಬೇಕು ಎಂಬುದನ್ನು ಆಕೆ ಕಲಿಯಬೇಕಾಗುತ್ತದೆ. ಮಾನಸಿಕ ಆರೋಗ್ಯಕ್ಕೆ ಗಮನ ನೀಡಬೇಕಾಗುತ್ತದೆ.

ವೃತ್ತಿಪರ ಮಹಿಳೆಯ ಮತ್ತೊಂದು ಪ್ರಮುಖ ಕಲಿಕೆಯ ಅಂಶ ಎಂದರೆ, ಸಮುದಾಯದ ಶಕ್ತಿ, ಇತರೆ ಮಹಿಳೆಯರೊಂದಿಗೆ ಸಂಪರ್ಕ ಮತ್ತು ಸವಾಲುಗಳನ್ನು ಅರ್ಥೈಸಿಕೊಳ್ಳುವಿಕೆ. ಇದರಿಂದ ತಾನು ಒಬ್ಬಂಟಿಯಲ್ಲ, ತನ್ನಂತೆ ಅನೇಕ ಮಂದಿ ಹೋರಾಟಗಳನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ತಿಳಿಯುತ್ತಾಳೆ.

ಆಕೆ ಕೆಲವು ಗಡಿಗಳನ್ನು ರೂಪಿಸಿ, 'ಇಲ್ಲ' ಎಂದು ಹೇಳುವುದನ್ನೂ ಕಲಿಯುವುದು ಅವಶ್ಯಕ. ಅನೇಕ ಕಡೆಗಳಿಂದ ಆಕೆ ಎಳೆಯಲ್ಪಟ್ಟಾಗ ಆಕೆಗೆ ಏನು ಅವಶ್ಯಕತೆ ಇದೆ ಎಂಬುದನ್ನು ತಿಳಿಯಲು ಆಕೆಗೆ ಸಾಧ್ಯವಾಗುತ್ತದೆ. ಇಲ್ಲ ಎಂದು ಹೇಳಲು ಕಲಿಯುವುದು, ಗಡಿಗಳನ್ನು ಹೊಂದಿಸುವುದನ್ನು ಆಕೆ ಕಲಿಯುವುದರಿಂದ ಇದು ಜೀವನದ ಮೇಲೆ ಹಿಡಿತ ಸಾಧಿಸಲು ಸಹಾಯ ಮಾಡುತ್ತದೆ. ತಾಳ್ಮೆ, ಸ್ವಯಂ ಸಹಾನುಭೂತಿ ಮತ್ತು ಬೆಂಬಲದ ಅಗತ್ಯತೆಯ ಜೊತೆಗೆ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿವಹಿಸುತ್ತಾಳೆ. ಅಗತ್ಯವಿರುವಾಗ ಸಹಾಯವನ್ನು ಪಡೆಯುವುದು, ಸ್ವಯಂ-ಆರೈಕೆಗೆ ಆದ್ಯತೆ ನೀಡುವುದು ಅತ್ಯಗತ್ಯ.

ವೃತ್ತಿನಿರತ ಮಹಿಳೆ ತಮ್ಮ ಮಾನಸಿಕ ಆರೋಗ್ಯದ ಸವಾಲು ಕುರಿತು ಮಾತನಾಡುವುದು, ಬದಲಾವಣೆಗಳನ್ನು ಪ್ರತಿಪಾದಿಸುವುದು ಅಗತ್ಯವಾಗಿದೆ. ಇದು ಕೆಲಸದ ಸ್ಥಳಗಳಲ್ಲಿ ಆರಾಮದಾಯ ಕಾರ್ಯ ನಿರ್ವಹಣೆ ವ್ಯವಸ್ಥೆ ಮತ್ತು ಮಾನಸಿಕ ಆರೋಗ್ಯ ಬೆಂಬಲಿತ ಕಾರ್ಯಕ್ರಮದಂತಹ ಕೆಲಸದ ಸ್ಥಳಗಳ ನಿಯಮಗಳ ಬೆಂಬಲದಿಂದ ಸಾಧ್ಯ. ಮಾನಸಿಕ ಆರೋಗ್ಯದ ಸವಾಲುಗಳು ದೌರ್ಬಲ್ಯದ ಸಂಕೇತವಲ್ಲ, ಬದಲಿಗೆ ಮಾನವ ಅನುಭವದ ನೈಸರ್ಗಿಕ ಭಾಗ ಎಂದು ನಾವು ಗುರುತಿಸಬೇಕು.

ಕೆಲಸ ಮಾಡುವ ಮಹಿಳೆಯರು ಎದುರಿಸುತ್ತಿರುವ ಮಾನಸಿಕ ಆರೋಗ್ಯ ಸವಾಲುಗಳು ನೈಜ ಮತ್ತು ಮಹತ್ವದ್ದಾಗಿದೆ. ನಮ್ಮ ಕೆಲಸದ ಸ್ಥಳಗಳು ಮತ್ತು ಸಮುದಾಯಗಳಲ್ಲಿ ಬದಲಾವಣೆಗಾಗಿ ಪ್ರತಿಪಾದಿಸಬೇಕು. ಆಗ ಒಟ್ಟಾಗಿ, ಎಲ್ಲ ಮಹಿಳೆಯರಿಗೆ ಹೆಚ್ಚು ಬೆಂಬಲ ಮತ್ತು ಸಹಾನುಭೂತಿಯ ಜಗತ್ತು ರಚಿಸಬಹುದು.

ಇದನ್ನೂ ಓದಿ: ಶಿಫ್ಟ್​ ಕೆಲಸಗಳಿಂದ ಮಹಿಳೆಯರ ಸಂತಾನೋತ್ಪತ್ತಿ ಮೇಲೆ ಪರಿಣಾಮ: ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.