ETV Bharat / sukhibhava

World Population Day 2023: ಸಮಾನತೆ ಮತ್ತು ಸಮೃದ್ಧಿಯ ಭವಿಷ್ಯಕ್ಕೆ ಕೆಲಸ ಮಾಡಬೇಕಿದೆ - ಜನಸಂಖ್ಯೆ ಹೆಚ್ಚಳ ಉಂಟುಮಾಡುವ ಸಮಸ್ಯೆಗಳ

ಜನಸಂಖ್ಯೆ ಹೆಚ್ಚಳವನ್ನು ಸಕರಾತ್ಮಕವಾಗಿ ಬಳಕೆ ಮಾಡಿಕೊಂಡು ಯುವ ಮಿದುಳುಗಳನ್ನು ದೇಶದ ಅಭಿವೃದ್ಧಿಯಲ್ಲಿ ಭಾಗವಾಗಿಸುವ ಕೆಲಸ ನಡೆಯಬೇಕಿದೆ.

We have to work towards a future of equality and prosperity

author img

By

Published : Jul 8, 2023, 3:54 PM IST

ಬೆಂಗಳೂರು: 1989ರಲ್ಲಿ ಜಾಗತಿಕ ಜನಸಂಖ್ಯೆ ಸರಿಸುಮಾರು 5 ಬಿಲಿಯನ್​ ನಷ್ಟಿತ್ತು. ಜನಸಂಖ್ಯೆ ಹೆಚ್ಚಳ ಉಂಟುಮಾಡುವ ಸಮಸ್ಯೆಗಳ ಕುರಿತು ಚಿಂತೆಗೆ ಒಳಗಾದ ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮಕ್ಕೆ ಮುಂದಾಯಿತು. ಅದರ ಅನುಸಾರ ಜಾಗತಿಕವಾಗಿ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನದ ಆಚರಣೆಗೆ ಮುಂದಾಗಿ, ಅದರ ನಿಯಂತ್ರಣ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಯಿತು. ಅಧಿಕ ಜನಸಂಖ್ಯೆಯಿಂದ ಆಗುವ ಪರಿಣಾಮ ಮತ್ತು ಇದರಿಂದ ಆಗುವ ಸಮಸ್ಯೆಗಳಿಂದ ಜಾಗತಿಕವಾಗಿ ಬೀರುವ ಪರಿಣಾಮದ ಕುರಿತು ಈ ದಿನವನ್ನು ಕೇಂದ್ರೀಕರಿಸಲಾಗಿದೆ.

ಅಧಿಕ ಜನಸಂಖ್ಯೆ ನಿಸ್ಸಾಂಶಯವಾಗಿ ಭೂಮಿಯ ಮೇಲೆ ಬದುಕುವ ಪ್ರತಿ ಜೀವಿಗಳಿಗೆ ಅನೇಕ ಸಮಸ್ಯೆಯನ್ನು ತಂದೊಡ್ಡುತ್ತದೆ. 2023ರಲ್ಲಿ ವಿಶ್ವ ಜನಸಂಖ್ಯಾ ದಿನದಂದು ಜಾಗತಿಕವಾಗಿ 8 ಬಿಲಿಯನ್​ ಜನಸಂಖ್ಯೆ ವರದಿಯಾಗಿದೆ. ಪ್ರತಿ ರಾಷ್ಟ್ರಗಳು ಜನಸಂಖ್ಯಾ ನಿಯಂತ್ರಣಕ್ಕೆ ಸಕರಾತ್ಮಕ ಕ್ರಮಕ್ಕೆ ಮುಂದಾಗಬೇಕುದೆ. ಜೊತೆಗೆ ಇದಕ್ಕೆ ನಾಗರಿಕರು ಕೂಡ ಸಹಕರಿಸಬೇಕಿದ್ದು, ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಳ್ಳುವ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಸಹಕಾರ ನೀಡಬೇಕಿದೆ.

ಬೇಕಿದೆ ಮಾನವ ಸಂಪನ್ಮೂಲದ ಬುದ್ದಿವಂತ ಬಳಕೆ: ವರದಿ ಅನುಸಾರ, ಭಾರತ ಚೀನಾವನ್ನು ಹಿಂದಿಕ್ಕಿ 1.4 ಬಿಲಿಯನ್​ ಜನಸಂಖ್ಯೆಯನ್ನು ಹೊಂದುವ ಮೂಲಕ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರ ಹೊಮ್ಮಿದೆ. ಭಾರತ ಸರ್ಕಾರ ಜನಸಂಖ್ಯೆ ನಿಯಂತ್ರಣಕ್ಕೆ ಕುಟುಂಬ ಯೋಜನೆ ಮತ್ತು ಕಲ್ಯಾಣ ಕಾರ್ಯಕ್ರಮಗಳ ಮೂಲಕ ಅನೇಕ ಕ್ರಮವನ್ನು ಕೈಗೊಂಡಿದೆ. ಇವುಗಳನ್ನು ಪರಿಣಾಮಕಾರಿಯಾಗಿ ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕಿದೆ. ಅಧಿಕ ಜನಸಂಖ್ಯೆಯು ದೇಶದ ಅಭಿವೃದ್ಧಿಯಲ್ಲಿ ಸಹಾಯ ಮಾಡಲು ಅನೇಕ ಬುದ್ದಿವಂತಿಕೆ ಮಿದುಳಿನ (ಯುವ ಜನತೆ) ಕೊಡುಗೆ ನೀಡುತ್ತದೆ.

2023ರಲ್ಲಿ ವಿಶ್ವ ಜನಸಂಖ್ಯೆ ದಿನವನ್ನು ಲಿಂಗ ಸಮಾನತೆಯ ಶಕ್ತಿಯನ್ನು ಬಿಡುಗಡೆ ಮಾಡುವುದು: ನಮ್ಮ ಪ್ರಪಂಚದ ಅನಂತ ಸಾಧ್ಯತೆಗಳನ್ನು ಮಹಿಳೆಯರು ಮತ್ತು ಹುಡುಗಿಯರ ಧ್ವನಿಯನ್ನು ಎತ್ತಿ ಹಿಡಿಯುವುದು ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಈ ಧ್ಯೇಯವೂ ಮಹಿಳೆಯ ಸಮಾನ ಹಕ್ಕಿನ ಪ್ರಾಮುಖ್ಯತೆನ್ನು ಎತ್ತಿ ಹಿಡಿಯುವ ಜೊತೆಗೆ ಲಿಂಗ ಸಮಾನತೆಯ ಅಡಿಪಾಯಕ್ಕಾಗಿ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ವಿಷಯದಲ್ಲಿ ಮಹಿಳೆಯರ ಅಗತ್ಯಗಳನ್ನು ಅರಿತುಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ತೋರಿಸಿದೆ. ಮಹಿಳೆಯರು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಮತ್ತು ಅನಾವರಣಗೊಳಿಸಲು ಸಬಲೀಕರಣಗೊಳಿಸಲು ಈ ದಿನವು ವೇದಿಕೆ ಒದಗಿಸುತ್ತದೆ.

ಮಾನವ ಬಂಡವಾಳ ಹೆಚ್ಚಳಕ್ಕೆ ಸರ್ಕಾರಗಳು ಪ್ರಸ್ತುತ ಹೆಜ್ಜೆ ಮತ್ತು ಅವಕಾಶ ನೀಡಿದಾಗ, ದೇಶದಲ್ಲಿ ವಿವಿಧ ರೀತಿಯ ಹೊಸ ಅವಿಷ್ಕಾರ ಮತ್ತು ಅನ್ವೇಷಣೆಗೆ ಅತ್ಯುತ್ತಮ ಕೊಡಗೆಯನ್ನು ಯುವಜನರು ನೀಡಲು ಸಾಧ್ಯವಾಗುತ್ತದೆ. ಜೊತೆಗೆ ಆಡಳಿತ ಮಂಡಳಿ ಕೂಡ ಆರ್ಥಿಕ ಬೆಳವಣಿಗೆಯನ್ನು ಅನುಭವಿಸಲು ಸುಲಭವಾಗಿ ಲಭ್ಯವಿರುವ ಮಾನವಶಕ್ತಿಯ ಲಾಭವನ್ನು ಪಡೆಯುವ ಲೆಕ್ಕಾಚಾರ ಮಾಡಬೇಕಾಗುತ್ತದೆ. ಅಧಿಕ ಜನಸಂಖ್ಯೆಯ ಬಗ್ಗೆ ದೂರು ನೀಡುವ ಬದಲು ಮಾನವ ಬುದ್ಧಿವಂತಿಕೆ ಮತ್ತು ಶ್ರಮವನ್ನು ಬಳಸಿಕೊಳ್ಳುವ ಮಾರ್ಗಗಳನ್ನು ರಾಷ್ಟ್ರಗಳು ಕಂಡುಕೊಂಡರೆ ಸುಸ್ಥಿರ ಪ್ರಪಂಚದ ಗುರಿಯನ್ನು ಸಾಧಿಸುವುದು ತುಂಬಾ ಸುಲಭವಾಗುತ್ತದೆ.

ಇದನ್ನೂ ಓದಿ: ಚೀನಾ ಹಿಂದಿಕ್ಕಿದ ಭಾರತ.. ಇದೀಗ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಇಂಡಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.