ವಿವಾಹದ ನಂತರ ದಂಪತಿ ಬಹುತೇಕ ಅನ್ಯೋನ್ಯವಾಗಿರುತ್ತಾರೆ. ಆದರೂ ಕೆಲವೊಮ್ಮೆ ವಿವಾಹದ ನಂತರದಲ್ಲಿಯೂ ಕೆಲ ಸಮಸ್ಯೆಗಳು ಅವರನ್ನು ಕಾಡುತ್ತವೆ. ಒಮ್ಮೊಮ್ಮೆ ಅವರು ಲೈಂಗಿಕ ಸುಖ ಅನುಭವಿಸುವುದಕ್ಕೂ ಸಾಧ್ಯವಾಗಲ್ಲ. ಲೈಂಗಿಕ ಕ್ರಿಯೆ ನಡೆಸುವಾಗ ಮಹಿಳೆಯರಲ್ಲಿ ಅತಿಯಾದ ನೋವು ಉಂಟಾಗುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಅವರು ಲೈಂಗಿಕ ಕ್ರಿಯೆ ಅನುಭವಿಸಲು ಸಾಧ್ಯವಾಗುವುದಿಲ್ಲ ಏಕೆ ಎಂದು ತಿಳಿಯೋಣ.
ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕಾದರೆ ಮಹಿಳೆಯರು ಮತ್ತು ಪುರುಷರು ಮಾನಸಿಕವಾಗಿ ಸಜ್ಜಾಗ ಬೇಕಾಗಿರಬೇಕಾಗುತ್ತದೆ. ಸಂಭೋಗಿಸುವಾಗ ಮಹಿಳೆಯರಲ್ಲಿ ಯೋನಿಯು ಲೂಬ್ರಿಕೆಂಟ್ ರೀತಿಯ ದ್ರವವೊಂದನ್ನು ಬಿಡುಗಡೆ ಮಾಡುತ್ತದೆ. ಈ ದ್ರವದ ಕಾರಣವೇ ಸಂಭೋಗದ ಸಮಯದಲ್ಲಿ ಮಹಿಳೆಯರಿಗೆ ನೋವಿನ ಪ್ರಮಾಣ ಕಡಿಮೆ ಇರುತ್ತದೆ.
ಒಂದು ವೇಳೆ ದ್ರವ ಬಿಡುಗಡೆಯಾಗದಿದ್ದರೆ ಮಹಿಳೆಗೆ ನೋವಿನ ಪ್ರಮಾಣ ಹೆಚ್ಚಿರುತ್ತದೆ. ಆದ್ದರಿಂದ ಆ ದ್ರವ ಬಿಡುಗಡೆಯಾಗಲು ಮಾನಸಿಕವಾಗಿ ಸಜ್ಜಾಗಬೇಕಾಗುತ್ತದೆ. ಆ ಮಾನಸಿಕ ಸಿದ್ಧತೆಯೇ ಆ ದ್ರವವನ್ನು ಬಿಡುಗಡೆ ಮಾಡಲು ಪ್ರಚೋದಿಸುತ್ತದೆ.
ನೀವು ಮಾನಸಿಕವಾಗಿ ಸಜ್ಜಾಗಿದ್ದರೂ, ದ್ರವ ಬಿಡುಗಡೆಯಾಗದೇ ನೋವು ಅನುಭವಿಸಿದರೆ, ನೀವು ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಜೊತೆಗೆ ಸಂಭೋಗಿಸುವ ವೇಳೆ ಯಾವುದೇ ಸೋಂಕಿಗೆ ಒಳಗಾದರೂ ನೀವು ವೈದ್ಯರ ಮೂಲಕ ಹಲವು ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ಅವರು ನಿಮ್ಮ ಸಮಸ್ಯೆ ತಿಳಿದು ಪರಿಹಾರ ನೀಡುತ್ತಾರೆ ಅಂತಾರೆ ಗೈನಕಾಲಜಿಸ್ಟ್ ವೈ.ಸವಿತಾದೇವಿ.