ETV Bharat / sukhibhava

ಮದ್ಯಪಾನವನ್ನು ತ್ಯಜಿಸಲು ಪ್ರಯತ್ನಿಸುತ್ತಿದ್ದೀರಾ ? ಇಲ್ಲಿವೆ ಸಲಹೆಗಳು..

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಯಾರಿಗೆ ತಾನೆ ತಿಳಿದಿಲ್ಲ. ಆದರೂ ಅಮಲಿನಲ್ಲಿ ತೇಲುವವರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇಂತಹವರ ಮಧ್ಯೆ ಕೆಲವರು ಇದನ್ನು ಬಿಡಲು ಪ್ರಯತ್ನಿಸುತ್ತಿದ್ದಾರೆ. ಅಂತಹವರಿಗಾಗಿ ಕೆಲವು ಸಲಹೆಗಳು ಇಲ್ಲಿವೆ..

ಮದ್ಯಪಾನ
ಮದ್ಯಪಾನ
author img

By

Published : Mar 30, 2022, 8:38 PM IST

ಕಳೆದೆರಡು ವರ್ಷಗಳಿಂದ ಎಲ್ಲವೂ ಬದಲಾಗುತ್ತಿದೆ. ಅನೇಕ ಜನರು ತಮ್ಮ ಕುಡಿಯುವ ಅಭ್ಯಾಸವನ್ನು ಬದಲಾಯಿಸಿಕೊಂಡ್ರೆ, ಹೆಚ್ಚಿನ ಜನರು ಕುಡಿಯುವುದನ್ನು ಕಡಿಮೆ ಮಾಡಲು ಅಥವಾ ಬಿಡಲು ಪ್ರಯತ್ನಿಸುತ್ತಿದ್ದಾರೆ. ಆಲ್ಕೋಹಾಲ್​​ಅನ್ನು ಕಡಿಮೆ ಮಾಡಲು ಅಥವಾ ತ್ಯಜಿಸಲು ಹಲವು ಆಯ್ಕೆಗಳಿವೆ. ಅದರಲ್ಲಿ ಯಾವುದು ಹೆಚ್ಚು ಪರಿಣಾಮಕಾರಿ ಎಂದು ತಿಳಿಯುವುದು ಕಷ್ಟ.

ಆಲ್ಕೋಹಾಲ್ ಅಥವಾ ಮದ್ಯಪಾನ ಎನ್ನುವುದು ಸಾಕಷ್ಟು ಜನರನ್ನು ತನ್ನ ಹಿಡಿತದಲ್ಲಿ ಬಂಧಿಸಿ ಇಟ್ಟುಕೊಳ್ಳುತ್ತದೆ. ಒಮ್ಮೆ ಇದಕ್ಕೆ ದಾಸರಾದರೆ ನಂತರ ಅದನ್ನು ತೊರೆಯುವುದು ಬಹಳ ಕಷ್ಟವಾಗುವುದು. ಹಾಗಾಗಿಯೇ ಸಾಕಷ್ಟು ಜನರು ಪ್ರತಿದಿನ ಮದ್ಯ ಕುಡಿಯುತ್ತಾರೆ. ಕೆಲವರು ವಾರಗಳಿಗೆ ಒಮ್ಮೆ, ತಿಂಗಳಿಗೊಮ್ಮೆ, ಹದಿನೈದು ದಿನಗಳಿಗೆ ಒಮ್ಮೆ ಹೀಗೆ ವಿವಿಧ ವೇಳಾ ಪಟ್ಟಿಯೊಂದಿಗೆ ಮದ್ಯಪಾನ ಮಾಡುತ್ತಾರೆ.

ಹೆಚ್ಚಿನ ಜನರು ಆಲ್ಕೋಹಾಲ್ ಸೇವನೆಯನ್ನು ಸುಲಭವಾಗಿ ತ್ಯಜಿಸುತ್ತಾರೆ ಅಥವಾ ತಮ ಕಡಿತಗೊಳಿಸುತ್ತಾರೆ. ಆದ್ರೆ ಹೆಚ್ಚು ಕುಡಿಯುವ ವ್ಯಕ್ತಿಗಳು ಇದರ ಮೇಲೆ ತುಂಬಾ ಅವಲಂಬಿತರಾಗಿರುತ್ತಾರೆ. ಇಂತವರು ಸುಲಭವಾಗಿ ಮದ್ಯಪಾನ ಮಾಡದೆ ದಿನವನ್ನು ಕಳೆಯಲು ಸಾಧ್ಯವಿಲ್ಲ ಅಥವಾ ಅದನ್ನು ಕಡಿಮೆ ಮಾಡಲು ಕಷ್ಟವಾಗುತ್ತದೆ.

ಇದನ್ನೂ ಓದಿ: ಕೊವ್ಯಾಕ್ಸಿನ್​ ಬೂಸ್ಟರ್​ ಡೋಸ್​ನಿಂದ ಕೊರೊನಾ ಪ್ರತಿಕಾಯಗಳು ಹೆಚ್ಚಳ- ವರದಿ

ನೀವು ಕುಡಿಯುವುದನ್ನು ಪ್ರಾರಂಭಿಸಿದ ನಂತರ ಅದರ ಪ್ರಮಾಣವನ್ನು ನಿಯಂತ್ರಿಸಲು ನಿಮಗೆ ಕಷ್ಟವಾಗುತ್ತದೆ. ಅಷ್ಟೇ ಅಲ್ಲದೇ ಅದರಿಂದ ಆಗುವ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಒಂದು ವೇಳೆ ನೀವು ಆಲ್ಕೋಹಾಲ್​ಅನ್ನು ಕುಡಿಯದಿದ್ದರೇ, ಅಸ್ವಸ್ಥತೆ, ಒಂದು ಅಥವಾ ಎರಡು ದಿನವಾದ ಬಳಿಕ ಕೈಗಳು ನಡುಗುವುದು ಈ ತರಹದ ಲಕ್ಷಣಗಳು ಕಂಡುಬರುತ್ತವೆ.

ನೀವು ಆಲ್ಕೋಹಾಲ್ ಮೇಲೆ ಸ್ವಲ್ಪ ಅವಲಂಬನೆಯನ್ನು ಹೊಂದಿದ್ದರೆ, ನೀವು ನಿಮ್ಮದೇ ಆದ ರೀತಿಯಲ್ಲಿ ಕಡಿತಗೊಳಿಸಬಹುದು. ಅದೇ ನೀವು ಮಧ್ಯಮ ರೀತಿಯಲ್ಲಿ ಅವಲಂಬಿತರಾಗಿದ್ದರೆ, ನೀವು ಕೆಲವು ರೀತಿಯ ಬೆಂಬಲಗಳನ್ನು ಪಡೆಯಬೇಕಾಗಬಹುದು. ನೀವು ಹೆಚ್ಚಾಗಿ ಅವಲಂಬಿತರಾಗಿದ್ದರೆ, ನಿಮ್ಮ ಮದ್ಯಪಾನದಲ್ಲಿ ಯಾವುದೇ ಬದಲಾವಣೆಯನ್ನು ಮಾಡುವ ಮೊದಲು ನೀವು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಏಕೆಂದರೆ ಹಠಾತ್ ನಿಲ್ಲಿಸುವುದರಿಂದ ಕೆಲವು ವ್ಯಕ್ತಿಗಳಲ್ಲಿ ರೋಗಗಳು ಮತ್ತು ಸಾವು ಸೇರಿದಂತೆ ತೀವ್ರ ಆರೋಗ್ಯ ಸಮಸ್ಯೆಗಳು ಸಹ ಉಂಟಾಗಬಹುದು.

ಹೆಚ್ಚಾಗಿ ಆಲ್ಕೊಹಾಲ್ ಮೇಲೆ ಅವಲಂಬಿತರಾಗಿರುವ ಜನರು ಆಲ್ಕೊಹಾಲ್​ನಿಂದ ಶಾಶ್ವತ ವಿರಾಮ ತೆಗೆದುಕೊಳ್ಳದೇ, ತಾತ್ಕಾಲಿಕ ವಿರಾಮವನ್ನು ತೆಗೆದುಕೊಳ್ಳುವುದು ಉತ್ತಮ. ನೀವು ಹೆಚ್ಚು ಕುಡಿಯುವುದನ್ನು ತಡೆಯಲು ವಿಶೇಷ ಚಿಕಿತ್ಸೆ ಅಥವಾ ನಿರಂತರ ಬೆಂಬಲ ಬೇಕಾಗಬಹುದು.

ಕೋಲ್ಡ್ ಟರ್ಕಿ ಅಥವಾ ಕಡಿತ : ನೀವು ಕುಡಿತದ ಮೇಲೆ ಹೆಚ್ಚು ಅವಲಂಬಿತರಾಗಿಲ್ಲದಿದ್ದರೆ, ಕುಡಿಯುವ ಪ್ರಮಾಣ ಅಥವಾ ಆವರ್ತನವನ್ನು ಕಡಿಮೆ ಮಾಡಲು ಇಲ್ಲವೇ ಸಂಪೂರ್ಣವಾಗಿ ತ್ಯಜಿಸಲು ಸಾಧ್ಯವಾಗುತ್ತದೆ. ತೀವ್ರವಾಗಿ ಅವಲಂಬಿತರಾಗಿರುವ ಜನರು ಸಾಮಾನ್ಯವಾಗಿ ಕುಡಿಯುವುದನ್ನು ನಿಲ್ಲಿಸಲು ಕೆಲವು ರೀತಿಯ ವಾಪಸಾತಿ ಬೆಂಬಲದ ಅಗತ್ಯವಿರುತ್ತದೆ. ಕೋಲ್ಡ್ ಟರ್ಕಿ ಎಂಬ ಚಿಕಿತ್ಸೆಯೂ ಕುಡಿತವನ್ನು ಸಂಪೂರ್ಣವಾಗಿ ನಿಲ್ಲಿಸುವಲ್ಲಿ ಸಹಕಾರಿಯಾಗಿದೆ. ನೀವು ಆಸ್ಪತ್ರೆಯಲ್ಲಿ ಸಾಮಾನ್ಯ ವೈದ್ಯರು ಅಥವಾ ನರ್ಸ್ ಸಹಾಯದಿಂದ ಅಥವಾ ಟೆಲಿಹೆಲ್ತ್ ಮೂಲಕ ಮನೆಯಲ್ಲಿ ವಾಪಸಾತಿ ಚಿಕಿತ್ಸೆಯನ್ನು ಕೈಗೊಳ್ಳಬಹುದು. ಈ ಸಮಯದಲ್ಲಿ ಐದರಿಂದ ಏಳು ದಿನಗಳವರೆಗೆ ಆಲ್ಕೊಹಾಲ್ ತೆಗೆದುಕೊಳ್ಳುವಂತಿಲ್ಲ.

ವೈದ್ಯರ ಸಲಹೆ: ಸಾಮಾನ್ಯ ವೈದ್ಯರಿಂದ ಕೇವಲ ಐದು ನಿಮಿಷಗಳ ಸಲಹೆಯು ಆಲ್ಕೋಹಾಲ್ ಸೇವನೆಯನ್ನು 30 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ. ವಿಶೇಷವಾಗಿ ಕಡಿಮೆ ಕುಡಿಯುವ ಜನರಿಗೆ ಇದು ಹೆಚ್ಚು ಸಹಕಾರಿಯಾಗಿದೆ. ಆದ್ದರಿಂದ ಕುಡಿಯುವುದನ್ನು ಕಡಿಮೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ನೀವು ವೈದ್ಯರೊಂದಿಗೆ ಚರ್ಚೆ ಮಾಡುವುದು ಉತ್ತಮ.

ಚಿಕಿತ್ಸೆಗಾಗಿ ಆ್ಯಪ್​ಗಳ ಅಭಿವೃದ್ಧಿ: ಮದ್ಯಪಾನವನ್ನು ತ್ಯಜಿಸಲು ಸಹಾಯ ಮಾಡುವ ಹಲವಾರು ಆ್ಯಪ್​ಗಳನ್ನು ಸಹ ಅಭಿವೃದ್ಧಿಪಡಿಸಲಾಗಿದೆ. ಈ ಅಪ್ಲಿಕೇಶನ್‌ಗಳ ಪ್ರಯೋಜನವನ್ನು ಜನರು ಪಡೆದುಕೊಳ್ಳಬಹುದಾಗಿದೆ. ಆದರೆ, ಇಲ್ಲಿ ಫಲಿತಾಂಶಗಳು ಸಾಧಾರಣವಾಗಿರುತ್ತವೆ. ಹಲೋ ಸಂಡೇ ಮಾರ್ನಿಂಗ್ಸ್ ಡೇಬ್ರೇಕ್ ಪ್ರೋಗ್ರಾಂ ದೊಡ್ಡ ಆನ್‌ಲೈನ್ ಆಲ್ಕೋಹಾಲ್ ಬೆಂಬಲ ಸಮುದಾಯವಾಗಿದೆ. ಇದನ್ನು ಮೊಬೈಲ್ ಮತ್ತು ಡೆಸ್ಕ್‌ಟಾಪ್ ಅಪ್ಲಿಕೇಶನ್ ಮೂಲಕ ಪ್ರವೇಶಿಸಬಹುದು. ಕುಡಿಯುವುದನ್ನು ಕಡಿಮೆ ಮಾಡಲು ಅಥವಾ ತ್ಯಜಿಸಲು ಬಯಸುವ ವ್ಯಕ್ತಿಗಳಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ಸಮಾಲೋಚನೆ ಮತ್ತು ಮಾನಸಿಕ ಚಿಕಿತ್ಸೆ: ಆಲ್ಕೋಹಾಲ್ ಸಮಸ್ಯೆಗಳಿಗೆ ಸಹಾಯ ಮಾಡುವ ಮುಖ್ಯ ಚಿಕಿತ್ಸೆಯು ಸಮಾಲೋಚನೆಯಾಗಿದೆ. ಮನಶಾಸ್ತ್ರಜ್ಞರಂತಹ ಅರ್ಹ ವೃತ್ತಿಪರರೊಂದಿಗೆ ಸಾಮಾನ್ಯವಾಗಿ ವಾರಕ್ಕೊಮ್ಮೆ ಸೆಷನ್‌ಗಳು ನಡೆಯುತ್ತವೆ. ಕೆಲವೊಮ್ಮೆ ಅವುಗಳನ್ನು ಗುಂಪು ಸೆಟ್ಟಿಂಗ್‌ಗಳಲ್ಲಿ ವಿತರಿಸಲಾಗುತ್ತದೆ. ಬದಲಾವಣೆಗಳನ್ನು ಮಾಡಲು ಪ್ರಯತ್ನಿಸುತ್ತಿರುವವರು ಮಾನಸಿಕ ಚಿಕಿತ್ಸೆ ಅಥವಾ ವೈದ್ಯರೊಂದಿಗೆ ಸಮಾಲೋಚನೆ ಮಾಡುವುದು ಒಳ್ಳೆಯದು.

ಪುನರ್ವಸತಿ ಕೇಂದ್ರಗಳಲ್ಲಿ ಇದ್ದು ಮದ್ಯಪಾನವನ್ನು ಬಿಡಬಹುದಾಗಿದೆ. ಅಲ್ಲದೇ ಮಧ್ಯಮದಿಂದ ಹೆಚ್ಚು ಆಲ್ಕೋಹಾಲ್​​ನನ್ನು ಅವಲಂಬಿಸಿರುವ ಜನರಿಗೆ ಹಲವಾರು ಔಷಧಿಗಳು ಸಹಾಯ ಮಾಡಬಹುದು. ಡಿಸಲ್ಫಿರಾಮ್ ಹಳೆಯ ಔಷಧಿಯಾಗಿದ್ದು, ಅದು ಆಲ್ಕೋಹಾಲ್ ಚಯಾಪಚಯ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಅದೇ ಸಮಯದಲ್ಲಿ ಆಲ್ಕೋಹಾಲ್ ಅನ್ನು ತೆಗೆದುಕೊಂಡರೆ ವಾಕರಿಕೆ ಮತ್ತು ವಾಂತಿಯನ್ನು ಉಂಟುಮಾಡುತ್ತದೆ. ಈಗಾಗಲೇ ವಾಪಸಾತಿಗೆ ಒಳಗಾಗಿರುವ ಜನರಲ್ಲಿ ಮರುಕಳಿಸುವಿಕೆಯನ್ನು ತಡೆಯಲು ಅಕಾಂಪ್ರೋಸೇಟ್ ಸಹಾಯ ಮಾಡುತ್ತದೆ. ನಾಲ್ಟ್ರೆಕ್ಸೋನ್ ಭಾರಿ ಪ್ರಮಾಣದಲ್ಲಿ ಕುಡಿಯುವವರಲ್ಲಿ ಬಯಕೆಗಳನ್ನು ಕಡಿಮೆ ಮಾಡುತ್ತದೆ.

ಕುಡಿಯುವಿಕೆಯನ್ನು ಕಡಿಮೆ ಮಾಡಲು ನೀವು ಪ್ರಯತ್ನಿಸುತ್ತಿದ್ದರೆ ಹಲವು ಆಯ್ಕೆಗಳಿವೆ ಮತ್ತು ಎಲ್ಲರಿಗೂ ಒಂದೇ ತಂತ್ರವು ಕಾರ್ಯನಿರ್ವಹಿಸುವುದಿಲ್ಲ. ನೀವು ಹುಡುಕುತ್ತಿರುವ ಫಲಿತಾಂಶಗಳನ್ನು ಪಡೆಯಲು ಆಕರ್ಷಕವಾಗಿ ಮತ್ತು ಕಾರ್ಯಸಾಧ್ಯವಾಗಿ ಕಾಣುವ ಯಾವುದನ್ನಾದರೂ ಪ್ರಾರಂಭಿಸುವುದು ಉತ್ತಮ ವಿಧಾನವಾಗಿದೆ. ಆಲ್ಕೋಹಾಲ್ ಎಂದಿಗೂ ಆರೋಗ್ಯಕ್ಕೆ ಹಿತವಾದುದ್ದಲ್ಲ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಸಾಕಷ್ಟು ಕೆಟ್ಟ ಪರಿಣಾಮ ಬೀರುತ್ತದೆ. ನಮ್ಮ ಆರೋಗ್ಯ, ತೂಕ ಹಾಗೂ ಮಾನಸಿಕ ಚಿಂತನೆಗಳು ಉತ್ತಮ ರೀತಿಯಲ್ಲಿ ಇರಬೇಕು ಎಂದು ಬಯಸುವುದಾದರೆ ಆಲ್ಕೋಹಾಲ್ ಭರಿತ ಪಾನೀಯವನ್ನು ಕುಡಿಯಬಾರದು. ನಿದ್ರಾ ಹೀನತೆ, ಹಾರ್ಮೋನ್ ವ್ಯತ್ಯಾಸ, ಅಂಗಾಂಗಗಳಲ್ಲಿ ವಿಷಕಾರಿ ಅಂಶ ಶೇಖರಣೆ ಆಗುವುದು, ಕಲ್ಲುಗಳ ಬೆಳವಣಿಗೆ ಹೀಗೆ ವಿವಿಧ ವೈಫಲ್ಯತೆಗಳು ಉಂಟಾಗುತ್ತವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.