ಇಂದು ಒತ್ತಡ ಸಮಸ್ಯೆ ಎಲ್ಲರಲ್ಲೂ ಸರ್ವೇ ಸಾಮಾನ್ಯ. ಕೆಲಸ, ಜೀವನ ಶೈಲಿ ಸೇರಿದಂತೆ ಮತ್ತಿತರ ಕಾರಣದಿಂದ ಇಂದು ಪ್ರತಿಯೊಬ್ಬರೂ ನಾನಾ ರೀತಿಯ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಒತ್ತಡಕ್ಕೆ ಅಯುರ್ವೇದದಲ್ಲಿ ದೇಹದ ಆಂತರಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಮೂಲಕ ಪರಿಹಾರವಿದೆ.
ದೇಹ ಮತ್ತು ಮನಸ್ಸಿನ ದೈಹಿಕ ಪ್ರತಿಕ್ರಿಯೆ ಘಟನೆಯೇ ಒತ್ತಡವಾಗಿದೆ. ಒತ್ತಡವನ್ನು ಆಯುರ್ವೇದದಲ್ಲಿ ಸಹಸ ಎಂದು ಕರೆಯಲಾಗಿದೆ. ಇದು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಹೆಚ್ಚಿನ ರೋಗಗಳಿಗೆ ಕಾರಣವಾಗುತ್ತದೆ. ಈ ಒತ್ತಡಕ್ಕೆ ಕಾರಣ ಅನಾರೋಗ್ಯಕರ ಆಹಾರ, ಅನಿಯಮಿತ ದಿನಚರಿ ಮತ್ತು ಮಾನಸಿಕ ಭಾವನೆಗಳಾದ ಭಯ, ಕ್ರೋಧ ಮತ್ತು ದುಃಖಗಳ ನಿಯಂತ್ರಣ ಇಲ್ಲದಿರುವಿಕೆಯೇ ಆಗಿದೆ.
ಆಯುರ್ವೇದದಲ್ಲಿ ಭಾವನೆ ಮತ್ತು ದೇಹದ ಅಂಗಗಳು ನಿಕಟ ಸಂಬಂಧ ಹೊಂದಿವೆ. ನಾವು ನಕಾರಾತ್ಮಕ ಭಾವನೆಗಳನ್ನು ಬಿಡುಗಡೆ ಮಾಡದೇ ಒತ್ತಿ ಹಿಡಿದಾಗ ಇದು ಅಂಗಗಳ ಮೇಲೆ ಒತ್ತಡ ಹಾಕಿ ಮತ್ತು ರೋಗಗಳಿಗೆ ಕಾರಣವಾಗುತ್ತದೆ. ಆಯುರ್ವೇದದ ಅನುಸಾರ, ಒತ್ತಡ ನರ ವ್ಯವಸ್ಥೆಗೆ ಅಡ್ಡಿಪಡಿಸುತ್ತದೆ. ಇದು ವಾತದೋಷವನ್ನು ನಿಯಂತ್ರಿಸಲ್ಪಡುತ್ತದೆ. ಆಯುರ್ವೇದ ತಂತ್ರಜ್ಞಾನ ಒತ್ತಡವನ್ನು ನಿರ್ವಹಣೆ ಮಾತ್ರ ಮಾಡದೇ ಅದು ದೇಹ ಮತ್ತು ಮನಸ್ಸಿನ ಹಾರ್ಮೋನ್ಗಳನ್ನು ನಿರ್ವಹಿಸುತ್ತದೆ. ಇದರ ಜೊತೆಗೆ ಇದು ನಿಧಾನವಾಗಿ ಆಂತರಿಕ ನಿರೀಕ್ಷೆಗಳ ಮಟ್ಟ ಹೆಚ್ಚಿಸುತ್ತದೆ.
ಆಯುರ್ವೇದ ಚಿಕಿತ್ಸೆಯಲ್ಲಿ ಮೂಲಭೂತವಾಗಿ ಎರಡು ಗುಣಗಳಿವೆ. ಆರೋಗ್ಯಯುತ ವ್ಯಕ್ತಿಯ ಆರೋಗ್ಯ ನಿರ್ವಹಣೆ ಮತ್ತು ಅನಾರೋಗ್ಯ ವ್ಯಕ್ತಿಯ ರೋಗ ನಿವಾರಣೆ ಹೊಂದಿರುತ್ತದೆ. ಆಯುರ್ವೇದ ಅನುಸಾರ, ದೇಹ, ಮನಸ್ಸು ಮತ್ತು ಆತ್ಮದ ಸಾಮರಸ್ಯದ ಒಕ್ಕೂಟವೇ ದೇಹವಾಗಿದೆ. ಸಮತೋಲಿತ ಪರಿಸ್ಥಿತಿಯನ್ನು ಮುಟ್ಟಲು ಜೀವನ ಶೈಲಿಯಲ್ಲಿ ಬದಲಾವಣೆ ಮಾಡಬೇಕು ಎಂದು ಆಯುರ್ವೇದ ಸಲಹೆ ನೀಡುತ್ತದೆ. ಉದಾಹರಣೆಗೆ, ಸಮತೋಲಿತ ಆಹಾರ ಯೋಜನೆ, ವ್ಯಾಯಾಮ ಚಟುವಟಿಕೆ ಮತ್ತು ಸಾಕಷ್ಟು ವಿಶ್ರಾಂತಿಯ ಅನುಸರಣೆ.
ಮಾನಸಿನ ನೆಮ್ಮದಿ, ಒತ್ತಡ ನಿರ್ವಹಣೆಯ ಚಿಕಿತ್ಸೆಗಳು ಮಾನಸಿಕ ಒತ್ತಡ, ನಿದ್ರಾಹೀನತೆ, ಏಕಾಗ್ರತೆಯ ಕೊರತೆ, ಆಯಾಸ ಮತ್ತು ತಲೆನೋವುಗಳ ಹೊರೆಯಿಂದ ಬರುವ ದುಷ್ಪರಿಣಾಮಗಳನ್ನು ನಿವಾರಿಸಲು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಚಿಕಿತ್ಸೆಯ ಚಿಕಿತ್ಸಾ ಕೋರ್ಸ್ 3 ಹಂತಗಳನ್ನು ಅನುಸರಿಸುತ್ತದೆ. ಪೂರ್ವಕರ್ಮ - ಪೂರ್ವಸಿದ್ಧತಾ ಹಂತ, ಶೋದನ - ಶುದ್ಧೀಕರಣ ಅಥವಾ ನಿರ್ಮೂಲನ ಹಂತ ಮತ್ತು ಅಂತಿಮವಾಗಿ ಸಮನ ಇದು ಸರಿಪಡಿಸುವ ಮತ್ತು ಪುನರ್ಯೌವನಗೊಳಿಸುವ ಹಂತವಾಗಿದೆ.
ಮೊದಲ ಹಂತದಲ್ಲಿ ಆಂತರಿಕ ಮತ್ತು ಬಾಹ್ಯ ಒಲಿಯೇಷನ್ (ಸ್ನೆಹನಂ) ಮತ್ತು ಚಿಕಿತ್ಸಕ ಬೆವರುವಿಕೆ (ಸ್ವೆದನಂ) ಮೂಲಕ ದೇಹದಲ್ಲಿ ವಿಷ ಹೊರಹಾಕುತ್ತದೆ. ರೋಗಿಯ ಆರೋಗ್ಯದ ಆಧಾರದ ಮೇಲೆ ಶುದ್ಧೀಕರಣ ವಿಧಾನ ಅಥವಾ ಪಂಚಕರ್ಮ ಚಿಕಿತ್ಸೆಯನ್ನು ಆಯ್ಕೆ ಮಾಡುತ್ತಾರೆ. ಈ ಎರಡು ಹಂತದ ಚಿಕಿತ್ಸೆಯ ಸಮಯದಲ್ಲಿ ದೇಹದ ದೋಷಗಳು ಅಸಮತೋಲನವನ್ನು ಸ್ಥಿರಗೊಳಿಸಲಾಗುತ್ತದೆ. ಮೂರನೇ ಮತ್ತು ಅಂತಿಮ ಹಂತದ ಚಿಕಿತ್ಸೆಯಲ್ಲಿ ನಿಧಾನವಾಗಿ ದೇಹ ಶುದ್ದೀಕರಣಗೊಂಡು ನಿರ್ಮೂಲನ ಹಂತದಿಂದ ಹೊರ ತೆಗೆಯಲಾಗುತ್ತದೆ.
ಇದನ್ನೂ ಓದಿ: ಮಕ್ಕಳು-ಹದಿಹರೆಯದವರಲ್ಲಿ ಖಿನ್ನತೆ ಮೂಡಿಸುತ್ತಿದೆ ಸ್ಥೂಲಕಾಯ..