ETV Bharat / sukhibhava

ಕೇರಳದಲ್ಲಿ ಮತ್ತೆ ನಿಫಾ ಉಲ್ಬಣ; ರಾಜ್ಯದಲ್ಲಿ ನಾಲ್ಕನೇ ಬಾರಿ ಕಾಣಿಸಿಕೊಂಡ ಸೋಂಕು - ಭಾರತದಲ್ಲಿ ಇದೀಗ ನಿಫಾ ಸೋಂಕು ಆತಂಕ

ಕೇರಳದಲ್ಲಿ ನಿಫಾ ಸೋಂಕು ಕಾಣಿಸಿಕೊಂಡಿದ್ದು, ನಿಯಂತ್ರಣಕ್ಕೆ ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸಿದೆ.

this is a fourth time Nipha infection is appearing Kerala

author img

By ETV Bharat Karnataka Team

Published : Sep 14, 2023, 1:34 PM IST

ಬೆಂಗಳೂರು: ಜಾಗತಿಕವಾಗಿ ಕೋವಿಡ್​ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಆದರೆ, ಭಾರತದಲ್ಲಿ ನಿಫಾ ಸೋಂಕು ಆತಂಕ ಮೂಡಿಸಿದೆ. ಕೇಳದಲ್ಲಿ ಮತ್ತೊಮ್ಮೆ ನಿಫಾ ಉಲ್ಬಣಗೊಂಡಿದ್ದು, ಸಾವು ಪ್ರಕರಣಗಳು ವರದಿಯಾಗಿವೆ. ನಿಫಾ ಝೋನೊಟಿಕ್​ ವೈರಸ್​ (ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸೋಂಕು) ಆಗಿದ್ದು, ಕಲುಷಿತ ಆಹಾರ ಅಥವಾ ಮನುಷ್ಯ ನೇರವಾಗಿ ಈ ಸ್ರಾವಕ್ಕೆ ತೆರೆದುಕೊಂಡಾಗ ಸೋಂಕು ತಗುಲುತ್ತದೆ.

ಕೇರಳದಲ್ಲಿ ಈ ಹಿಂದೆ ಕಂಡುಬಂದಿದ್ದ ಸೋಂಕನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿತ್ತು. ಇದೀಗ ಸೋಮವಾರ, ಆಗಸ್ಟ್​ 30ರಂದು ವ್ಯಕ್ತಿಯೊಬ್ಬ ನಿಫಾಗೆ ಬಲಿಯಾಗಿತ್ತು, ಮತ್ತೊಮ್ಮೆ ಸೋಂಕು ಅಬ್ಬರಿಸಿದೆ.

ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್​ ನೀಡಿದ ಮಾಹಿತಿಯಂತೆ, ಆಗಸ್ಟ್​ 30ರಂದು ನಿಫಾಗೆ ಇಬ್ಬರು ಬಲಿಯಾಗಿದ್ದು, ಮೂರು ಸಕ್ರಿಯ ಪ್ರಕರಣಗಳು ದಾಖಲಾಗಿವೆ. 24 ವರ್ಷದ ಆರೋಗ್ಯ ಕಾರ್ಯಕರ್ತರೊಬ್ಬರಲ್ಲಿ ನಿಫಾ ದೃಢಪಟ್ಟಿದೆ ಎಂದಿದ್ದಾರೆ.

ರಾಜ್ಯದಲ್ಲಿ ನಿಫಾ ಕುರಿತು ವರದಿ ನೀಡಿದ ರಾಜ್ಯ ಸರ್ಕಾರ, ಸೋಂಕು ಹರಡುವಿಕೆ ಪತ್ತೆ ಮಾಡುವ ಉದ್ದೇಶದಿಂದ 153 ಆರೋಗ್ಯ ಕಾರ್ಯಕರ್ತರು ಸೇರಿದಂತೆ ಕನಿಷ್ಠ 706 ಮಂದಿ ಸೋಂಕು ಪರೀಕ್ಷೆಗೆ ಒಳಗಾಗಿದ್ದು, ವರದಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

ರಾಜ್ಯದಲ್ಲಿ 4ನೇ ಬಾರಿ ಕಾಣಿಸಿಕೊಂಡ ಸೋಂಕು: ಕೇರಳದಲ್ಲಿ ನಿಫಾ ಇದೀಗ ನಾಲ್ಕನೇ ಬಾರಿ ಮತ್ತೆ ಪತ್ತೆಯಾಗಿದೆ. ಮೊದಲ ಬಾರಿಗೆ 2018ರಲ್ಲಿ ಕೊಝಿಕ್ಕೋಡ್​ನಲ್ಲಿ ಕಾಣಿಸಿಕೊಂಡಿತ್ತು. ಇದಾದ ಬಳಿಕ 2021 ಮತ್ತು 2019ರಲ್ಲಿ ವರದಿಯಾಗಿದ್ದು, ಪ್ರತಿ ಬಾರಿಯೂ ಕೊಚ್ಚಿಯ ವಿವಿಧ ಪ್ರದೇಶದಲ್ಲಿ ಪತ್ತೆಯಾಗಿದೆ.

ಸೋಂಕಿನ ಲಕ್ಷಣಗಳು: ನಿಫಾ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಕೆಮ್ಮು, ಉಸಿರಾಟ ಸಮಸ್ಯೆ, ಅತಿಸಾರ, ಆಯಾಸ, ವಾಂತಿ, ಸ್ನಾಯು ನೋವು ಮತ್ತು ಆಲಸ್ಯ. ಇನ್ನು ಕೆಲವರಲ್ಲಿ ಈ ಸೋಂಕಿನ ಲಕ್ಷಣಗಳು ಗೋಚರರಹಿತವಾಗಿರುತ್ತದೆ. ಇಲ್ಲವೇ ಸೌಮ್ಯ ಲಕ್ಷಣ ಹೊಂದಿದೆ. ಇದನ್ನು ಆರಂಭದಲ್ಲೇ ಪತ್ತೆ ಮಾಡಿ ತಡೆಯುವುದು ಕಷ್ಟ ಎಂದು ಬೆಂಗಳೂರಿನ ಸಿಎಂಐ ಆಸ್ಪತ್ರೆಯ ವೈದ್ಯರಾದ ಡಾ.ಸ್ವಾತಿ ರಾಜಗೋಪಾಲ್​ ತಿಳಿಸಿದರು.

ಇದರ ಹೊರತಾಗಿ ಸಾಮಾನ್ಯ ಲಕ್ಷಣವೆಂದರೆ, ಇದು ಕೇಂದ್ರ ನರವ್ಯವಸ್ಥೆಗೆ ಹಾನಿ ಮಾಡುತ್ತದೆ. ಇದರಲ್ಲಿ ಮಿದುಳು ಕೂಡ ಒಳಗೊಂಡಿದೆ. ಇದರ ಪರಿಣಾಮಬಾಗಿ ಮಿದುಳಿನ ಊರಿಯೂತ ಸಂಭವಿಸಬಹುದು. ಈ ರೋಗಕ್ಕೆ ಮುನ್ನ ಒಂದು ಅಥವಾ ಎರಡು ಭಾರಿ ಗೊಂದಲದ ಅನುಭವಗಳು ಎದುರಾಗುತ್ತವೆ ಎಂದು ಸೋಂಕು ರೋಗ ತಜ್ಞರಾದ ಡಾ.ಈಶ್ವರ್​ ಗಿಲಡ ಹೇಳಿದ್ದಾರೆ. ಈ ಸೋಂಕಿನ ಉಪಸ್ಥಿತಿಯ ಅವಧಿ 14 ದಿನವಾಗಿದ್ದು, ಗಂಭೀರ ಅಥವಾ ಸಾವಿನ ದರ ಶೇ 40ರಿಂದ 75ರಷ್ಟಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

ಕೇರಳದಲ್ಲಿ ಪತ್ತೆಯಾಗಿರುವ ನಿಫಾ ಬಾಂಗ್ಲಾದೇಶದ ತಳಿಯಾಗಿದ್ದು, ಇದು ಹೆಚ್ಚಿನ ಸೋಂಕು ಹೊಂದಿಲ್ಲದೇ ಇದ್ದರೂ ಹೆಚ್ಚಿನ ಮರಣ ದರ ಹೊಂದಿದೆ. ಈ ತಳಿಯು ಮಾನವರಿಂದ ಮಾನವರಿಗೆ ಹರಡುತ್ತದೆ. ಇಲ್ಲಿಯವರೆಗೆ ಹಂದಿ, ನಾಯಿ, ಬೆಕ್ಕು, ಮೇಕೆ ಹೊರತಾಗಿ ಬಾವಲಿ ಕಚ್ಚಿದ ಹಣ್ಣು (ಫ್ರೂಟ್​ ಬ್ಯಾಟ್​​) ಒಂದೇ ಪ್ರಾಣಿಗಳಿಂದ ಮನುಷ್ಯರಿಗೆ ನಿಫಾ ತಗುಲಿದೆ ಎಂದು ತಿಳಿದುಬಂದಿದೆ.

ನಿಫಾ ವೈರಸ್​ ಮಾನವರಿಗೆ ಸೇರಿದಂತೆ ಪ್ರಾಣಿಗಳಿಗೆ ಮಾರಣಾಂತಿಕವಾಗಿದೆ. ಈ ವೈರಸ್​​ ಹಂದಿಗಳಂತಹ ಪ್ರಾಣಿಗಳಿಗೂ ಗಂಭೀರ ಸ್ವರೂಪದ್ದಾಗಿದೆ. ಇದರಿಂದ ರೈತರಿಗೆ ಅಪಾರ ನಷ್ಟ ತಂದೊಡ್ಡಬಲ್ಲದು ಎಂದು ವೈದ್ಯರು ಹೇಳಿದರು.

ಸೋಂಕು ತಡೆ ಹೇಗೆ?: ನಿಫಾ ಸೋಂಕು ತಡೆಗೆ ಇರುವ ಪ್ರಮುಖ ಮುನ್ನೆಚ್ಚರಿಕೆ ಕ್ರಮ ಎಂದರೆ, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್​ ಧರಿಸುವುದು ಮತ್ತು ಸ್ಯಾನಿಟೈಸರ್​​ ಬಳಕೆ. ನಿಫಾ ವೈರಸ್​ ತಡೆಗೆ ಚಿಕಿತ್ಸೆ ಮತ್ತು ಲಸಿಕೆ ಇಲ್ಲದಿರುವುದರಿಂದ ಕಂಟೈನ್‌ಮೆಂಟ್​​ ಉತ್ತಮ ಮಾರ್ಗ. ಈ ಹಿಂದಿನ ಎಂ102.4 ಹಂತದಲ್ಲಿನ ಪ್ರಯತ್ನಿಸಿದ ಚಿಕಿತ್ಸೆ ಯಶಸ್ವಿಯಾಗಿದ್ದು, ಅದನ್ನೇ ಬಳಕೆ ಮಾಡಬೇಕಿದೆ. ವೈದ್ಯರು ರೆಮಿಡೆಸಿವಿರ್​ ಮತ್ತು ಇತರೆಯನ್ನು ಪ್ರಯತ್ನಿಸುತ್ತಿದ್ದು, ಇದು ಯಶಸ್ವಿಯಾಗಿಲ್ಲ ಎಂಬುದು ಸಾಬೀತಾಗಿದೆ.

1999ರಲ್ಲಿ ಮೊದಲ ಬಾರಿಗೆ ನಿಫಾ ಸೋಂಕು ಗುರುತಿಸಲಾಗಿದೆ. ಮಲೇಷ್ಯಾ, ಸಿಂಗಾಪೂರ್​, ಬಾಂಗ್ಲಾದೇಶ, ಫಿಲಿಪ್ಪೀನ್ಸ್‌​ ಮತ್ತು ಭಾರತದಲ್ಲಿ ಇದರ ಗುರುತುಗಳಿದ್ದು, ಸಾಂಕ್ರಾಮಿಕತೆಯ ಸ್ವರೂಪ ಪಡೆದಿಲ್ಲ. ಸೋಂಕಿತ ಪ್ರದೇಶದಲ್ಲಿ ಬಾವಲಿ ಮತ್ತು ಹಂದಿಗಳ ದೇಹದ ಸ್ರಾವದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಸೋಂಕಿನಿಂದ ಸುರಕ್ಷೆ ಪಡೆಯಲು ಕೈಯ ಶುಚಿತ್ವ ಕಾಪಾಡುವುದು ಮುಖ್ಯ. ವಿಶೇಷವಾಗಿ ಪ್ರಾಣಿಗಳ ನಿರ್ವಹಣೆಯ ಬಳಿಕ, ಪ್ರಾಣಿ ಸಾಕಾಣಿಕೆ ಕೇಂದ್ರ ಅಥವಾ ಪ್ರಾಣಿಗಳ ಮಾರುಕಟ್ಟೆಗಳಿಗೆ ಭೇಟಿ ನೀಡಿದಾಗ ಅಥವಾ ಪ್ರಾಣಿಗಳ ತ್ಯಾಜ್ಯವನ್ನು ಶುಚಿಗೊಳಿಸಿದ ಬಳಿಕ ಕೈಗಳನ್ನು ಸೋಪಿನಲ್ಲಿ ತೊಳೆಯುವುದು ಮುಖ್ಯ. ಪ್ರಾಣಿಗಳಿಗೆ ಸೂಕ್ತ ಲಸಿಕೆ, ಮಾಂಸಗಳನ್ನು ಸರಿಯಾಗಿ ಬೇಯಿಸುವುದಕ್ಕೆ ಆದ್ಯತೆ ನೀಡಬೇಕು ಎಂದಿದ್ದಾರೆ. ಸೋಂಕಿಗೆ ಸಂಬಂಧಿಸಿದ ಲಕ್ಷಣಗಳು ಕಂಡು ಬಂದಾಕ್ಷಣ ಅಥವಾ ಸೋಂಕಿನ ಅನುಮಾನ ಮೂಡಿದಾಗ ತಕ್ಷಣ ವೈದ್ಯಕೀಯ ಸಂಪರ್ಕಕ್ಕೆ ಒಳಗಾಗುವಂತೆಯೂ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ನಿಫಾ ಸೋಂಕಿತರ ಸಂಪರ್ಕಕ್ಕೆ ಬಂದ 702 ಮಂದಿ ಮೇಲೆ ತೀವ್ರ ನಿಗಾ.. ಒಡಿಶಾದಲ್ಲಿ ಕೀಟ ಕಡಿತದಿಂದ 5 ಸಾವು

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.